ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ಯಾರೂ ಸಹಿಸುವುದಿಲ್ಲ. ಬೇರೆಯವರ ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧವೂ ಹೌದು. ಆಗ್ರಾದಲ್ಲಿ ಮುಂದಿನ ಮನೆಯವರ ಖಾಸಗಿತನಕ್ಕೆ ಧಕ್ಕೆ ತಂದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ.
ಮೂರು ಮಹಡಿ ಮನೆಯಲ್ಲಿರುವ ವ್ಯಾಪಾರಿಯೊಬ್ಬ ಮೂರನೇ ಫ್ಲೋರ್ ಗೆ ಸಿಸಿ ಟಿವಿ ಹಾಕಿದ್ದಾನೆ. ಮುಂದಿನ ಮನೆಯಲ್ಲಿ ಮಹಿಳೆ ಬ್ಯೂಟಿಪಾರ್ಲರ್ ನಡೆಸುತ್ತಿದ್ದಾಳೆ. ಆಕೆ ಮನೆಯಲ್ಲಿ ಸೊಸೆ ಹಾಗೂ ಮೊಮ್ಮಗ ಕೂಡ ಇದ್ದಾನಂತೆ.
ನಮ್ಮ ಖಾಸಗಿತನಕ್ಕೆ ಧಕ್ಕೆಯಾಗ್ತಿದೆ ಎಂದು ಮಹಿಳೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.