ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ, ಹಲವು ಬದಲಾವಣೆಗಳು ಬಂದಿವೆ. ಅದರಲ್ಲೂ ವರ್ಕ್ ಫ್ರಂ ಹೋಂ ಶುರುವಾದ ಬಳಿಕ ಕಾರ್ಪೋರೇಟ್ ವಲಯದಲ್ಲಿ ಹಲವು ಬದಲಾವಣೆಯಾಗಿದ್ದು, ಅದರಲ್ಲಿ ರಜೆ ವಿಷಯವೂ ಒಂದಂತೆ.
ಹೌದು, ಖಾಸಗಿ ಸಂಸ್ಥೆಗಳಲ್ಲಿನ ಬಹುತೇಕ ಸಿಬ್ಬಂದಿ ಕೊರೊನಾ ಶುರುವಾದ ಬಳಿಕ ರಜೆಯನ್ನೇ ತೆಗೆದುಕೊಳ್ಳುತ್ತಿಲ್ಲವಂತೆ. ಕೆಲಸ ಕಳೆದುಕೊಳ್ಳುವ ಭೀತಿಯಿಂದ ಅನೇಕರು ಸಿಎಲ್ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಮುಂದಿನ ದಿನದಲ್ಲಿ ಬಾಕಿ ಉಳಿದ ಸಿಎಲ್ ಗಳಿಗೆ ವೇತನ ಎನ್ಕ್ಯಾಷ್ ಮಾಡಿಕೊಳ್ಳುತ್ತಾರೆ. ಇದು ಆಡಳಿತ ಮಂಡಳಿಗಳಿಗೆ ತಲೆಬಿಸಿಯಾಗಿದೆ.
ಆದ್ದರಿಂದ ಬಹುತೇಕ ಸಂಸ್ಥೆಗಳು ರಜೆ ವಿಷಯವಾಗಿ ನೀತಿಯನ್ನು ಬದಲಾಯಿಸಲು ಸಜ್ಜಾಗಿವೆ ಅಂತೆ. ಆದರೆ ಒಂದೇ ದಿನದಲ್ಲಿ ಇದು ಸಾಧ್ಯವಿಲ್ಲವಾದ್ದರಿಂದ ಈ ಬಗ್ಗೆ ಸಾಲು ಸಾಲು ಸಭೆ ನಡೆಸಲಾಗುತ್ತಿದ್ದು, ಎನ್ಕ್ಯಾಷ್ ಮಾಡಿಕೊಳ್ಳಲು ಇರುವ ಮಿತಿಯನ್ನು ಕಡಿತಗೊಳಿಸುವ ಸಾಧ್ಯತೆ ಹಾಗೂ ಉತ್ತಮ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಹೆಚ್ಚು ರಜೆ ತೆಗೆದುಕೊಳ್ಳಲು ಪ್ರೋತ್ಸಾಹಿಸುವ ಸಾಧ್ಯತೆಯಿದೆ.