ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದ ಕಾನಕೇರಿಯಲ್ಲಿ ಮನೆ ಮುಂಭಾಗದ ಗೇಟಿಗೆ ವಿದ್ಯುತ್ ಹರಿಬಿಟ್ಟ ವ್ಯಕ್ತಿ ಅದೇ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
58 ವರ್ಷದ ನಿಂಗಪ್ಪ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಹುಚ್ಚುನಾಯಿ ಮನೆಗೆ ನುಗ್ಗುವ ಭೀತಿಯಿಂದ ಅವರು ಗೇಟಿಗೆ ತಂತಿ ಕಟ್ಟಿ ವಿದ್ಯುತ್ ಹರಿಬಿಟ್ಟಿದ್ದರು. ಇತ್ತೀಚೆಗೆ ಅವರ ಮನೆಯ ಬಳಿ ಹುಚ್ಚುನಾಯಿ ನುಗ್ಗಿದ್ದು ಕುಟುಂಬದವರು ಆತಂಕಕ್ಕೀಡಾಗಿದ್ದರು.
ಈ ಕಾರಣದಿಂದ ಮುಂಭಾಗದ ಗೇಟಿಗೆ ವಿದ್ಯುತ್ ಹಾಯಿಸಲಾಗಿತ್ತು. ಆದರೆ, ನಿಂಗಪ್ಪ ತಾವೇ ಗೇಟ್ ಗೆ ಹಾಯಿಸಿದ್ದ ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅವರ ಪುತ್ರ ಸೊರಬ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.