ಕೊರೋನಾ ಕಾಲದಲ್ಲಿ ನಗದು ರಹಿತ ವ್ಯವಹಾರ ಚೇತರಿಕೆ ಕಂಡಿದ್ದು, ಸಣ್ಣ ನಗರಗಳು, ಪಟ್ಟಣಗಳಲ್ಲಿ ಡಿಜಿಟಲ್ ಪಾವತಿ ಮತ್ತು ವಹಿವಾಟಿನ ಚೇತರಿಕೆ ಮುಂಚೂಣಿಯಲ್ಲಿದೆ ಎಂದು ಎಂಸ್ವಿಪ್ ಸ್ಥಾಪಕ ಮತ್ತು ಸಿಇಒ ಮನೀಶ್ ಪಟೇಲ್ ಹೇಳಿದ್ದಾರೆ.
ಡಿಜಿಟಲ್ ಪಾವತಿಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಂಪರ್ಕವಿಲ್ಲದ ವಹಿವಾಟುಗಳಿಗೆ ಆದ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಕಾಲದಲ್ಲಿ ಡಿಜಿಟಲ್ ಪಾವತಿ ಚೇತರಿಕೆ ಕಂಡುಬಂದಿದ್ದು, ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಕ್ರಮವಾಗಿ ಶೇಕಡ 55 ಮತ್ತು ಶೇಕಡ 54 ರಷ್ಟು ಚೇತರಿಕೆ ಕಂಡಿದ್ದು ದೇಶಾದ್ಯಂತ ಡಿಜಿಟಲ್ ಹೆಚ್ಚಾಗಿದೆ. ಕ್ಯೂಆರ್ ಪಾವತಿಗಳು ಚೇತರಿಸಿಕೊಂಡಿದೆ. ಸಣ್ಣ ವ್ಯಾಪಾರಿಗಳು ಇಂತಹ ಸಂಪರ್ಕವಿಲ್ಲದ ನಗದುರಹಿತ ವಹಿವಾಟು ಆಯ್ದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.