alex Certify ಬಿಗ್ ನ್ಯೂಸ್: ‘ಮನ್ ಕಿ ಬಾತ್’ನಲ್ಲಿ ಚನ್ನಪಟ್ಟಣದ ಗೊಂಬೆ ಬಗ್ಗೆ ಮೋದಿ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ‘ಮನ್ ಕಿ ಬಾತ್’ನಲ್ಲಿ ಚನ್ನಪಟ್ಟಣದ ಗೊಂಬೆ ಬಗ್ಗೆ ಮೋದಿ ಮಾತು

ನವದೆಹಲಿ: 68ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿ ಕೊರೋನಾ ಕಾರಣದಿಂದಾಗಿ ಕಾರ್ಯಕ್ರಮಗಳ ಆಯೋಜನೆ ವೇಳೆ ಜನ ಎಚ್ಚರಿಕೆ ವಹಿಸಿದ್ದಾರೆ. ಆನ್ಲೈನ್ ನಲ್ಲಿ ಗಣೇಶೋತ್ಸವ ಆಚರಿಸಲಾಗಿದೆ‌‌‌‌.‌ ಕೊರೋನಾ ನಡುವೆ ಗಣಪತಿ ಹಬ್ಬ ಆಚರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜನ ಹಬ್ಬವನ್ನು ಆಚರಿಸಿದ್ದು, ಸಂಭ್ರಮ ಮನೆ ಮಾಡಿದೆ ಎಂದು ಹೇಳಿದ್ದಾರೆ.

ದೇಶದ ಹಲವೆಡೆ ಉತ್ತಮ ಮಳೆಯಾಗಿದೆ. ಉತ್ತಮ ಮಳೆಯಿಂದಾಗಿ ಅನ್ನದಾತರು ಖುಷಿಯಾಗಿದ್ದಾರೆ. ಕೊರೋನಾ ಮಧ್ಯೆ ನಮ್ಮ ಹೊಟ್ಟೆ ತುಂಬಿಸಲು ರೈತರು ಶ್ರಮ ವಹಿಸುತ್ತಿದ್ದಾರೆ. ರೈತರ ಶ್ರಮದಿಂದ ಹಬ್ಬಗಳು ವರ್ಣರಂಜಿತವಾಗಿದೆ. ಜನರ ಸಹನೆ, ತಾಳ್ಮೆ ಮೆಚ್ಚಬೇಕಿದೆ ಎಂದು ತಿಳಿಸಿದ್ದಾರೆ.

ಹಬ್ಬ ಪರಿಸರದ ನಡುವೆ ಬಹಳ ಹಳೆಯ ಸಂಬಂಧವಿದೆ. ದೇಶದ ಪ್ರಗತಿಗೆ ರೈತರು ಬೆವರು ಹರಿಸುತ್ತಿದ್ದು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಜನ ಪಣತೊಟ್ಟಿದ್ದಾರೆ. ಭಾರತ ಆಟಿಕೆಯ ವಸ್ತು ತಯಾರಿಕೆಯ ಹಬ್ ಆಗಬಹುದು ಎಂದು ತಿಳಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ಗೊಂಬೆ ಆಟಿಕೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ಚನ್ನಪಟ್ಟಣದ ಆಟಿಕೆಗಳ ಬಗ್ಗೆ ಮಾತನಾಡಿ ಆಟಿಕೆ ತಯಾರಿಕೆಯಲ್ಲಿ ದೇಶದ ಪಾಲುದಾರಿಕೆ ಹೆಚ್ಚಬೇಕಿದೆ ಎಂದು ಹೇಳಿದ್ದಾರೆ. ಚೀನಾ ಆಪ್ ನಿಷೇಧಿಸಿದ ನಂತರ ದೇಶೀಯ ಆಪ್ ಬಳಕೆ ಹೆಚ್ಚಾಗಿರುವ ಬಗ್ಗೆ ಮಾತನಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...