ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಕೊರೊನಾದಿಂದಾಗಿ ಬೇರೆ ಬೇರೆ ಉದ್ಯಮಗಳು ನೆಲಕಚ್ಚಿದ್ದರೆ, ಚಿನ್ನದ ಬೆಲೆ ಮಾತ್ರ ಏರಿಕೆ ಕಾಣುತ್ತಿತ್ತು. ಚಿನ್ನ ಕೊಳ್ಳಬೇಕು ಎಂದವರಂತೂ ಬೆಲೆ ಕೇಳಿಯೇ ಹಿಂದೆ ಸರಿಯುತ್ತಿದ್ದರು. ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ.
ಹೌದು, ಒಂದು ವಾರದಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ನಿನ್ನೆಯೂ ಕೂಡ ಚಿನ್ನದ ದರ ಇಳಿಕೆಯಾಗಿದೆ. ಆಭರಣ ಚಿನ್ನ 10 ಗ್ರಾಂಗೆ 530 ರೂಪಾಯಿ ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನಕ್ಕೆ 48,520 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂನ ದರ 52,390 ರೂಪಾಯಿ ಆಗಿದೆ.
ಇತ್ತ ಚಿನ್ನದ ದರದಲ್ಲಿ ಇಳಿಕೆ ಕಾಣುತ್ತಿದ್ದರೆ ಅತ್ತ ಬೆಳ್ಳಿಯ ದರ ಏರಿಕೆಯಾಗುತ್ತಿದೆ. ಒಂದು ಕೆ.ಜಿ.ಗೆ 800 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಒಂದು ಕೆ.ಜಿ. ಬೆಳ್ಳಿಗೆ 66,300 ರೂಪಾಯಿ ಆಗಿದೆ. ಒಟ್ನಲ್ಲಿ ಚಿನ್ನ ಕೊಂಡುಕೊಳ್ಳಬೇಕು ಎಂದವರಿಗಂತೂ ಬೆಲೆ ಇಳಿಕೆ ಖುಷಿ ನೀಡಿದೆ.