ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 27 ರಂದು ಸಾಯುತ್ತಾರೆ ಎಂದು ಸಿಂಪ್ಸನ್ ಭವಿಷ್ಯ ನುಡಿದಿತ್ತು ಎಂಬ ಸುದ್ದಿಯೊಂದು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಡೊನಾಲ್ಡ್ ಟ್ರಂಪ್ ಶವ ಪೆಟ್ಟಿಗೆಯಲ್ಲಿ ಮಲಗಿದ ಕಾರ್ಟೂನ್ ಫೋಟೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದೃಷ್ಟವಶಾತ್ ಅಂಥ ಯಾವುದೇ ಘಟನೆ ನಡೆದಿಲ್ಲ. ಆದರೆ, ಈ ಸುದ್ದಿ ಹರಡಿದ್ದು, ಹೇಗೆ..? ಹುಟ್ಟಿದ್ದು ಎಲ್ಲಿಂದ ಎಂಬ ಹುಡುಕಾಟ ಎಲ್ಲೆಡೆ ನಡೆದಿದೆ.
ಟ್ರಂಪ್ ಸಾವಿನ ಕುರಿತು ಸಿಂಪ್ಸನ್ ಭವಿಷ್ಯ ನುಡಿದಿಲ್ಲ. ಆದರೆ ಟೇಲರ್ ಲೋರೇಂಜ್ ಎಂಬ ಮಹಿಳೆ ಜೂನ್ನಲ್ಲಿ ಟಿಕ್ಟಾಕ್ ವಿಡಿಯೋವೊಂದನ್ನು ಮಾಡಿದ್ದರು. ಅದರಲ್ಲಿ ಸುಮ್ಮನೆ ತಮಾಷೆಗಾಗಿ ಆಗಸ್ಟ್ 27 ರಂದು ಮಹತ್ವದ ಘಟನೆ ನಡೆಯಲಿದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ವ್ಯಕ್ತಿಯೊಬ್ಬರು ಡೊನಾಲ್ಡ್ ಟ್ರಂಪ್ ಸಾವು ಎಂದಿದ್ದರು. ಅದನ್ನೇ ಇಟ್ಟುಕೊಂಡು ಡೊನಾಲ್ಡ್ ಟ್ರಂಪ್ ಸಾಯುತ್ತಾರೆ ಎಂಬ ಚಿತ್ರ ಸೃಷ್ಟಿಸಿ ಹರಿಬಿಡಲಾಗಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ತಯಾರಿ ನಡೆದಿರುವುದರಿಂದ ಅಲ್ಲಿ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದ್ದು, ಇಂಥ ವಿಚಿತ್ರ ವಿಷಯಗಳೆಲ್ಲ ಪ್ರಚಾರಕ್ಕೆ ಬರುತ್ತಿವೆ.
ಏನಿದು ಸಿಂಪ್ಸನ್ ಭವಿಷ್ಯ..?
ಸಿಂಪ್ಸನ್ ಎಂಬುದು 1987 ರಲ್ಲಿ ಬಂದ ಅಮೆರಿಕದ ಒಂದು ಕಾಮಿಡಿ ಎನಿಮೇಶನ್ ಟಿವಿ ಶೋ. ಇದರಲ್ಲಿ ಹೇಳಿದ ಕೆಲವು ಅಂಶಗಳು ನಿಜವಾಗುತ್ತವೆ. ಅಮೆರಿಕದ ಅಧ್ಯಕ್ಷರ ಗೆಲುವು ಸೇರಿ ಹಲವು ಪ್ರಿಡಿಕ್ಷನ್ಗಳು ನಿಜವಾಗಿವೆ ಎಂಬುದು ಅಮೆರಿಕನ್ನರ ನಂಬಿಕೆ.
https://twitter.com/faithlovehope76/status/1297994553522294785?ref_src=twsrc%5Etfw%7Ctwcamp%5Etweetembed%7Ctwterm%5E1297994553522294785%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fdid-the-simpsons-predict-donald-trumps-death-in-august-heres-the-truth-behind-coffin-photo-2826921.html
https://twitter.com/youreastraggot/status/1298431476917309443?ref_src=twsrc%5Etfw%7Ctwcamp%5Etweetembed%7Ctwterm%5E1298431476917309443%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fdid-the-simpsons-predict-donald-trumps-death-in-august-heres-the-truth-behind-coffin-photo-2826921.html