ಬ್ರಿಟನ್ ಜನರಿಗೆ ಇನ್ನು ಎರಡು ವಾರದಲ್ಲಿ ಕೊರೊನಾ ಲಸಿಕೆ ನೀಡಲಾಗುವುದು. ಇದಕ್ಕಾಗಿ ಕೊರೊನಾ ಲಸಿಕೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಲಾಗಿದೆ.
ಕೊರೊನಾ ಲಸಿಕೆಯ ತುರ್ತು ಬಳಕೆಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಲಸಿಕೆಗಾಗಿ ಜನ ಕಾಯತೊಡಗಿದ್ದಾರೆ. ಸುರಕ್ಷತಾ ಮಾನದಂಡ ಮತ್ತು ಪರಿಣಾಮಕಾರಿಯಾಗಬಲ್ಲ ಕೊರೊನಾ ಲಸಿಕೆಯ ಬಳಕೆಗೆ ಅವಕಾಶ ನೀಡಲು ಬ್ರಿಟನ್ ಸರ್ಕಾರ ಕ್ರಮಕೈಗೊಂಡಿದೆ. ತುರ್ತು ಬಳಕೆಗೆ ಅನುಮತಿ ನೀಡಲು ಮುಂದಾಗಿದೆ.
ಬ್ರಿಟನ್ ಸರ್ಕಾರದ ಕಾಯ್ದೆ ಪ್ರಕಾರ ಪರಿಣಾಮಕಾರಿ ಎನಿಸಿರುವ ಲಸಿಕೆಗೆ ಮಾತ್ರ ತುರ್ತು ಬಳಕೆಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಅವಕಾಶವಿದ್ದು, ಬ್ರಿಟನ್ ಮಾದರಿಯಲ್ಲೇ ಕಾಯ್ದೆ ತಿದ್ದುಪಡಿ ತರಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ವಿಶ್ವದಲ್ಲಿ 200ಕ್ಕೂ ಹೆಚ್ಚು ವೈರಸ್ ನಿಗ್ರಹ ಲಸಿಕೆ ಪ್ರಯೋಗ ನಡೆದಿದೆ. ಆಕ್ಸ್ ಫರ್ಡ್ ವಿವಿಯ ಪ್ರಯೋಗ ಕೊನೆಯ ಹಂತದಲ್ಲಿದ್ದು 30 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದಾದ ಬಳಿಕ ತುರ್ತು ಬಳಕೆಗೆ ಅನುಮತಿ ಸಿಗಬಹುದೆಂದು ಹೇಳಲಾಗಿದೆ.