ನಿಮ್ಮ ಫೋನನ್ನು ಕೈಯಿಂದ ಜಾರಿ ಬೀಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬಚ್ಚಲುಮನೆಯಂಥ ನೀರು ನಿಲ್ಲುವ ಜಾಗಗಳಲ್ಲಿ.
ಹೆಲೆನಾದ ಹಾಲೆಂಡ್ ಲೇಕ್ ಪ್ರದೇಶದ ಮಹಿಳೆಯೊಬ್ಬರು ತಮ್ಮ ಫೋನ್ ಅನ್ನು ಟಾಯ್ಲೆಟ್‌ನ ಕಮೋಡ್ ಒಂದರಲ್ಲಿ ಕಳೆದುಕೊಂಡಿದ್ದರು. ಆಕೆಗೆ, ತಮ್ಮ ಐಫೋನ್ ಮತ್ತೆ ಸಿಕ್ಕಿದೆಯೆಂದು ಇತ್ತೀಚೆಗೆ ಕರೆ ಬಂದಿತ್ತು.
ಕಾರ್ಮಿಕರಿಗೆ ಈ ಫೋನ್ ಸಿಕ್ಕಿದ್ದು, ಟಾಯ್ಲೆಟ್ ಟ್ಯಾಂಕ್‌ನ ಬುಡದಲ್ಲಿ ಈ ಫೋನ್ ಸಿಕ್ಕಿದೆ. ಗ್ರಾಬರ್‌ಗಳನ್ನು ಬಳಸಿಕೊಂಡು ಫೋನನ್ನು ಮೇಲೆತ್ತಿದ ಕಾರ್ಮಿಕರ ತಂಡ, ಆ ಫೋನನ್ನು ಸ್ಯಾನಿಟೈಸ್ ಮಾಡಿದೆ. ಆ ಫೋನ್ ಒಣಗಿದ ಬಳಿಕ ಅದು ಮತ್ತೆ ಆನ್ ಆಗಿದ್ದನ್ನು ಕಂಡು ದಂಗಾಗಿದ್ದಾರೆ.
ಫೋನ್ ಲಾಕ್ ಆಗಿದ್ದ ಕಾರಣ, ಅದು ಯಾರಿಗೆ ಸೇರಿದ್ದು ಎಂದು ತಿಳಿದುಕೊಳ್ಳಲು ಅವರುಗಳಿಗೆ ಸಾಧ್ಯವಾಗಲಿಲ್ಲ. ಆ ಫೋನ್ ಸಿಮ್ ಅನ್ನು ಬೇರೊಂದು ಫೋನ್‌ಗೆ ಹಾಕಿ ಅದರ ಮಾಲೀಕರು ಯಾರೆಂದು ತಿಳಿದುಕೊಂಡ ಕಾರ್ಮಿಕರು, ಐಫೋನ್ ಅದರ ಮಾಲೀಕರಿಗೆ ತಲುಪಿಸಲು ಸಫಲರಾಗಿದ್ದಾರೆ.