ಬೆಂಗಳೂರು: ರಾಜ್ಯದ ಎಲ್ಲಾ ನೋಂದಾಯಿತ ವಾಹನಗಳಿಗೆ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ. ಹೊಸ ವಾಹನ ಹೊರತುಪಡಿಸಿ ಆಗಸ್ಟ್ 15 ರಿಂದ ಸೆಪ್ಟಂಬರ್ 15 ರ ಒಳಗೆ ಪಾವತಿ ಮಾಡಬೇಕಿದ್ದ ತೆರಿಗೆ ಗಡುವನ್ನು ದಂಡ ರಹಿತವಾಗಿ ಪಾವತಿಸಲು ಸೆಪ್ಟಂಬರ್ 30 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದ ಎಲ್ಲ ನೊಂದಾಯಿತ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ಸೆಪ್ಟಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ, ಕೇಂದ್ರ ಮೋಟಾರ್ ವಾಹನ ಕಾಯ್ದೆಯ ಅನ್ವಯ ವಿತರಿಸಲಾದ ಎಲ್ಲ ದಾಖಲೆಗಳ ಸಿಂಧುತ್ವ ಅವಧಿ ಮುಕ್ತಾಯಗೊಂಡಿದ್ದರೂ ಡಿಸೆಂಬರ್ ಕೊನೆಯವರೆಗೆ ಮಾನ್ಯವಾಗಿರುತ್ತದೆ ಎಂದು ಹೇಳಲಾಗಿದೆ.