ನಟಿ ಸನ್ನಿ ಲಿಯೋನ್ ಅತ್ಯಧಿಕ ಅಂಕ ಗಳಿಸುವ ಮೂಲಕ ಪದವಿಪೂರ್ವ ಶಿಕ್ಷಣ ಪರೀಕ್ಷೆ ಪಾಸ್ ಮಾಡಿದ್ದು, ಕಾಲೇಜಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಅವರ ಹೆಸರು ರಾರಾಜಿಸುತ್ತಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಆಶುತೋಷ್ ಕಾಲೇಜಿನ ವೆಬ್ ಸೈಟ್ ನಲ್ಲಿ ಮೆರಿಟ್ ಪಟ್ಟಿ ಬಿಡುಗಡೆಯಾಗಿದ್ದು, ಬಿಎ ಇಂಗ್ಲಿಷ್ ಪದವಿ ಶಿಕ್ಷಣಕ್ಕೆ ಆಯ್ಕೆಯಾದವರ ಮೆರಿಟ್ ಪಟ್ಟಿಯಲ್ಲಿ ಮೊದಲ ಹೆಸರೇ ಸನ್ನಿ ಲಿಯೋನ್ ಅವರದ್ದಿದೆ.
ಈ ಪಟ್ಟಿ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಕುಚೋದ್ಯ ಮಾಡುವ ಸಲುವಾಗಿಯೇ ಇಂಥದ್ದೊಂದು ಪಟ್ಟಿಯನ್ನು ತಯಾರಿಸಿ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಈ ವೈರಲ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟಿ, ಮುಂದಿನ ಸೆಮಿಸ್ಟರ್ ನಲ್ಲಿ ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ. ನೀವೆಲ್ಲ ನನ್ನ ತರಗತಿಯಲ್ಲಿ ಇರುತ್ತೀರೆಂದು ನಂಬಿದ್ದೇನೆ ಎಂಬುದಾಗಿ ಹಾಸ್ಯಮಯವಾಗಿಯೇ ಉತ್ತರಿಸಿದ್ದಾರೆ.
ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಆಡಳಿತ ಮಂಡಳಿ, ಅರ್ಜಿ ಸಂಖ್ಯೆ 9513008704 ಹಾಗೂ ನೋಂದಣಿ ಸಂಖ್ಯೆ 207777-6666 ರಲ್ಲಿ ಸನ್ನಿ ಲಿಯೋನ್ ಹೆಸರು ಹೇಗೆ ಬಂತು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಆಂತರಿಕ ತನಿಖೆ ನಡೆಸುವುದಾಗಿ ಹೇಳಿದೆ.