ವಿಶ್ವವಿದ್ಯಾಲಯ ಮಟ್ಟದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ಬಡ್ತಿ ನೀಡುವಂತಿಲ್ಲ ಎಂಬ ಯುಜಿಸಿ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಅಷ್ಟೇ ಅಲ್ಲದೆ, ಯುಜಿಸಿ ನಿಯಮದ ಪ್ರಕಾರ ಆಯಾ ರಾಜ್ಯಗಳು ಕೊರೋನಾ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪರೀಕ್ಷೆಯನ್ನು ಮುಂದೂಡಬಹುದೇ ಹೊರತು, ರದ್ದುಪಡಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸೆಪ್ಟೆಂಬರ್ 30 ರೊಳಗೆ ಅಂತಿಮ ಪರೀಕ್ಷೆ ನಡೆಸಬೇಕೆಂಬುದು ಯುಜಿಸಿ ನಿಯಮ. ಆದರೀಗ ಕೊರೋನಾವನ್ನು ವಿಪತ್ತು ಎಂದು ಪರಿಗಣಿಸಿ ಪರೀಕ್ಷೆ ಮುಂದೂಡಲು ಅವಕಾಶವಿದೆ. ಅಂತಿಮ ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಬಡ್ತಿ ನೀಡುವಂತಿಲ್ಲ. ಪರೀಕ್ಷೆ ನಡೆಸಲೇಬೇಕು ಎಂದು ಆದೇಶ ನೀಡಿದೆ.