ಪಾಸ್ತಾ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ನಿರಂತರ ಪಾಸ್ತಾ ಸೇವನೆ ಮಕ್ಕಳು ಹಾಗೂ ದೊಡ್ಡವರಿಗೆ ಉತ್ತಮ ಡಯಟ್ ಹಾಗೂ ದೇಹಕ್ಕೆ ಬೇಕಾಗುವ ಸತ್ವವನ್ನೂ ಅದು ಒದಗಿಸುತ್ತದೆ ಎಂದು ಅಮೆರಿಕ ತಜ್ಞರ ಸಂಶೋಧನೆಯೊಂದು ಹೇಳಿದೆ.
ಪಾಸ್ತಾ ತಿನ್ನುವ ಗಂಡು ಹಾಗೂ ಹೆಣ್ಣು ಮಕ್ಕಳ ತೂಕ ಇಳಿಕೆಯಾಗಿದ್ದು, ಮೌಲ್ಯಮಾಪನದಲ್ಲಿ ಕಂಡುಬಂದಿದೆ. ಫ್ರಂಟಿಯರ್ಸ್ ಇನ್ ನ್ಯೂಟ್ರೀಶನ್ ಎಂಬ ಜರ್ನಲ್ ನಲ್ಲಿ ಈ ಕುರಿತ ಅಧ್ಯಯನದ ಅಂಶಗಳನ್ನು ಪ್ರಕಟಿಸಲಾಗಿದೆ.
“ಪಾಸ್ತಾ ನಮ್ಮ ದೇಹವೆಂಬ ಕಟ್ಟಡಕ್ಕೆ ಮಹತ್ವದ ಬ್ಲಾಕ್ ಗಳನ್ನು ಜೋಡಿಸುತ್ತದೆ. ದೇಹಕ್ಕೆ ಬೇಕಾದ ಹಣ್ಣು, ತರಕಾರಿ, ಮಾಂಸ, ಮೀನು, ಕಾಳುಗಳ ಅಂಶವನ್ನು ಸಮ ಪ್ರಮಾಣದಲ್ಲಿ ಒದಗಿಸುತ್ತದೆ” ಎಂದು ಸಂಶೋಧಕ ಹಾಗೂ ಅಮೆರಿಕ ನ್ಯಾಚುರಲ್ ಪಾಸ್ತಾ ಅಸೋಸಿಯೇಷನ್ ನ ಪೋಷಣಾ ಶಾಸ್ತ್ರ ಸಂವಹನ ವಿಭಾಗದ ನಿರ್ದೇಶಕ ಡೈನೆ ವೆಲ್ಡನ್ ತಿಳಿಸಿದ್ದಾರೆ.