ಮ್ಯೂಸಿಕ್ ಬ್ಯಾಂಡ್ ಗಾಯನಕ್ಕೆ ಬರೀ ಮನುಷ್ಯರು ಮಾತ್ರವಲ್ಲದೇ ಕೆಲವೊಮ್ಮೆ ಪ್ರಾಣಿಗಳು ಕುಣಿಯುವುದನ್ನೂ ಸಾಕಷ್ಟು ಬಾರಿ ನೋಡಿದ್ದೇವೆ.
ಬಾತುಕೋಳಿಗಳು ತಮ್ಮದೊಂದು ವೃಂದ ಕಟ್ಟಿಕೊಂಡು, ವಾದ್ಯಗೋಷ್ಠಿಯೊಂದಕ್ಕೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಬಾತುಕೋಳಿಯ ವಿಶಿಷ್ಟತೆಗೆ ನೆಟ್ಟಿಗರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.