ಬೆಂಗಳೂರು: ಬಿಎಸ್ – 4 ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಿಲ್ಲ.
ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಕಾರ್, ದ್ವಿಚಕ್ರ ವಾಹನ ಸೇರಿದಂತೆ ಬಿಎಸ್ – 4 ವಾಹನಗಳು ನೋಂದಣಿಯಾಗಬೇಕಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೇಶದಲ್ಲಿ ಬಿಎಸ್ – 4 ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ಏಪ್ರಿಲ್ ನಿಂದ ಸ್ಥಗಿತಗೊಳಿಸಲಾಗಿದೆ.
ಮಾರ್ಚ್ ಅಂತ್ಯದವರೆಗೆ ವಾಹನಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಲಾಕ್ಡೌನ್ ಜಾರಿಯಾದ ನಂತರದಲ್ಲಿ ವಾಹನಗಳ ಮಾರಾಟ ಮತ್ತು ನೋಂದಣಿ ನಿಂತಿದ್ದು, ಉತ್ಪಾದನೆಯಾಗಿರುವ ವಾಹನಗಳ ಮಾರಾಟವಿಲ್ಲದೇ ನಷ್ಟ ಉಂಟಾಗಿದ್ದ ಕಾರಣ 10 ದಿನಗಳ ಕಾಲ ಬಿಎಸ್ – 4 ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.
ಆದರೆ ಸ್ಪಷ್ಟತೆ ಇಲ್ಲದ ಕಾರಣ ಸಾರಿಗೆ ಇಲಾಖೆ ನೋಂದಣಿ ಬಗ್ಗೆ ಆದೇಶ ಹೊರಡಿಸಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಬಿಎಸ್ – 4 ವಾಹನಗಳು ನೋಂದಣಿಗೆ ಬಾಕಿ ಉಳಿದಿವೆ ಎಂದು ಹೇಳಲಾಗಿದೆ.