ಕೊರೊನಾ ವೈರಸ್ ಕಾರಣದಿಂದಾಗಿ ಜಗತ್ತಿನಾದ್ಯಂತ ಮಿಲಿಯನ್ಗಟ್ಟಲೇ ಜನರು ಅವರವರ ಮನೆಗಳಲ್ಲೇ ಲಾಕ್ಡೌನ್ ಆಗಿರುವ ಕಾರಣದಿಂದ ಮನರಂಜನೆಗೆ ಅತಿಯಾಗಿ ಸಾಮಾಜಿಕ ಜಾಲತಾಣವನ್ನೇ ನಂಬಿಕೊಳ್ಳುವಂತಾಗಿದೆ. ಈ ಕಾರಣದಿಂದ ಬೇಡಿಕೆಗೆ ತಕ್ಕಂತೆ ಅಂತರ್ಜಾಲದ ಪೂರೈಕೆ ಮಾಡುವುದು ಸೇವಾದಾರರಿಗೆ ಸವಾಲಿನ ಕೆಲಸವಾಗಿಬಿಟ್ಟಿದೆ.
ಯಾವಾಗಲೂ ಅಂತರ್ಜಾಲಕ್ಕೆ ಅಡಿಕ್ಟ್ ಆಗಿರುವ ಬದಲು ವಾಸ್ತವಿಕ ಜಗತ್ತಿನಲ್ಲಿ ಸಾಧ್ಯವಾದಷ್ಟು ಸಮಯ ಕಳೆಯಲು ಜನರಿಗೆ ಪ್ರೇರಣೆ ನೀಡಲು ಅಮೆರಿಕದ ಸ್ಯಾಟಲೈಟ್ ಇಂಟರ್ನೆಟ್ ಎಂಬ ಅಂತರ್ಜಾಲ ಸೇವಾದಾರ ಕಂಪನಿಯೊಂದು, ಅಂತರ್ಜಾಲದ ಸಂಪರ್ಕವಿಲ್ಲದೇ ತಮ್ಮಿಚ್ಛೆಯ ರಾಷ್ಟ್ರೀಯ ಉದ್ಯಾನವೊಂದರಲ್ಲಿ ಒಂದು ವಾರಾಂತ್ಯ ಕಳೆಯಲು ಇಚ್ಛಿಸುವ ಮಂದಿಗೆ $1000 ನೀಡುವುದಾಗಿ ಘೋಷಿಸಿದೆ.
ಇಲ್ಲೊಂದು ದೊಡ್ಡ ಷರತ್ತಿದ್ದು, ಈ ಚಾಲೆಂಜ್ ಸ್ವೀಕರಿಸುವ ಮಂದಿ 48 ಗಂಟೆಗಳ ಮಟ್ಟಿಗೆ ಯಾವುದೇ ರೀತಿಯ ಸಾಧನದ ಮುಖಾಂತರವೂ ಆನ್ಲೈನ್ಗೆ ಬರುವಂತಿಲ್ಲ.