ಮೂರು ವರ್ಷದ ಪುಟಾಣಿಯೊಬ್ಬ ತನ್ನ ತಂದೆಯ ಮೊಬೈಲ್ ಬಳಸಿ 2600 ರೂ.ಮೊತ್ತದ ಮೆಕ್‌ಡೊನಾಲ್ಡ್ಸ್ ಫ್ರೈ ಆರ್ಡರ್ ಮಾಡಿದ್ದಲ್ಲದೇ, ಬೇಗ ತಂದುಕೊಡಲು ಟಿಪ್ಸ್ ಕೂಡ ನೀಡಿದ್ದಾನೆ.
ಐರ್ಲೆಂಡ್ ನ ರಾಜಧಾನಿ ಡಬ್ಲಿನ್ ಹ್ಯಾರಿ ಕಿಯೋಘ್-ಲೀ ಆಗಸ್ಟ್ 14 ರಂದು ತನ್ನ ತಂದೆಯ ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೊಗಳನ್ನು ವೀಕ್ಷಿಸುತ್ತಿದ್ದಾಗ, ಉಬರ್ ಈಟ್ಸ್ ಅಪ್ಲಿಕೇಶನ್ ಅನ್ನು ಪ್ರವೇಶಿಸಿದ್ದಾನೆ.
ಬಳಿಕ ಎಂಸಿ 30 (2,600 ರೂ.) ಮೌಲ್ಯದ ಮೆಕ್‌ಡೊನಾಲ್ಡ್ಸ್ ಫ್ರೈ ಚಿಪ್ಸ್ ಗಳನ್ನು ಆರ್ಡರ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ತಕ್ಷಣವೇ ಡೆಲವರಿಗಾಗಿ ಎಂಸಿ 3 ಕೂಡ ನೀಡಿದ್ದಾನೆ.
ಡೆಲಿವರಿ ಬಾಯ್ ಬಾಗಿಲು ತಟ್ಟಿದಾಗ ಪೋಷಕರು ಅನುಮಾನದಲ್ಲೇ ಬಾಗಿಲು ತೆರೆದು, ನಾವು ಆರ್ಡರ್ ಮಾಡಿಲ್ಲ ಎಂದಿದ್ದಾರೆ. ಆದರೆ ವಿಳಾಸ ಸರಿ ಇರುವುದನ್ನು ಡೆಲಿವರಿ ಬಾಯ್ ಖಚಿತಪಡಿಸಿದ್ದಾನೆ.
ಪತಿ ತನಗೆ ಹೇಳದೆ ಆರ್ಡರ್ ಮಾಡಿರಬಹುದೆಂದು ಮಗುವಿನ ತಂದೆ ಆಶ್ಲೇ ಭಾವಿಸಿದ. ನಂತರ ಗೊತ್ತಾಗಿದ್ದು ಇದು ಮಗುವಿನ ಕಿತಾಪತಿ ಎಂದು. ಪೋಷಕರು ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
https://www.facebook.com/ashley.keogh.54/posts/2770654809830667