alex Certify ಕೊರೊನಾ ಮಧ್ಯೆ ಮಹತ್ವದ ನಿರ್ಧಾರ ಕೈಗೊಂಡ ʼಬಾಟಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆ ಮಹತ್ವದ ನಿರ್ಧಾರ ಕೈಗೊಂಡ ʼಬಾಟಾʼ

Bata plans to add 100 stores in FY'21 amid covid-19 outbreak

ಪಾದರಕ್ಷೆಗಳ ಪ್ರಸಿದ್ಧ ಕಂಪನಿ ಬಾಟಾ ಇಂಡಿಯಾ, ಕೊರೊನಾ ಮಧ್ಯೆ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ 2020-2021 ರ ಹಣಕಾಸು ವರ್ಷದಲ್ಲಿ ಸುಮಾರು 100 ಹೊಸ ಬಾಟಾ ಮಳಿಗೆ ತೆರೆಯಲು ನಿರ್ಧರಿಸಿದೆ.

ಶೇಕಡಾ 80ರಷ್ಟು ಮಳಿಗೆಗಳು ಶ್ರೇಣಿ-2, ಶ್ರೇಣಿ-3 ನಗರಗಳಲ್ಲಿರಲಿದೆ. ಫ್ರಾಂಚೈಸಿ ಮಾದರಿಯಲ್ಲಿ ಬಾಟಾ ಮಳಿಗೆಗಳನ್ನು ತೆರೆಯಲಿದೆ.

ಕಂಪನಿಯು ಪ್ರಸ್ತುತ ದೇಶಾದ್ಯಂತ ಸುಮಾರು 1,500 ಮಳಿಗೆಗಳನ್ನು ಹೊಂದಿದೆ. 2023 ರ ವೇಳೆಗೆ 500 ಹೊಸ ಮಳಿಗೆಗಳನ್ನು ತೆರೆಯುವ ಮೂಲಕ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಯೋಜನೆ ಹೊಂದಿದೆ. ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಮೆಟ್ರೋ ನಗರಗಳಿಗಿಂತ ನಗರದಲ್ಲಿ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿದೆ. ಹಾಗಾಗಿ ಆ ಪ್ರದೇಶಗಳಲ್ಲಿ ನೆಟ್ವರ್ಕ್ ವಿಸ್ತರಣೆ ಮಾಡಲು ಕಂಪನಿ ಮುಂದಾಗಿದೆ.

ನಗರ ಪ್ರದೇಶಗಳಲ್ಲಿ ವ್ಯಾಪಾರವನ್ನು ಹೆಚ್ಚಿಸಲು ಪಾದರಕ್ಷೆಗಳ ಕಂಪನಿ ಬಾಟಾ ಸ್ಟೋರ್ ಆನ್ ವೀಲ್ಸ್ ಎಂಬ ಹೊಸ ಯೋಜನೆ ಪ್ರಾರಂಭಿಸಿದೆ. ಅಲ್ಲದೆ ಆನ್‌ಲೈನ್ ಶಾಪಿಂಗ್ ಮತ್ತು ವಾಟ್ಸಾಪ್ ಚಾಟ್ ಮೂಲಕ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಒತ್ತು ನೀಡುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...