ಔರಂಗಬಾದ್: ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿನಿ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ ಪೊಲೀಸ್ ನನ್ನು ಬಂಧಿಸಲಾಗಿದೆ.
ಆರೋಪಿ ಪೊಲೀಸ್ ಮೊದಲ ಸಲದ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಕಾನ್ಸ್ ಟೇಬಲ್ ನನ್ನು ಬಂಧಿಸಿದ್ದಾರೆ.
ದುವೆಯ ಭರವಸೆ ನೀಡಿದ್ದ ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆಗಸ್ಟ್ 1ರಂದು ಪೋಲಿಸ್ ರವೀಂದ್ರ ದಾಭಾಡೆ ವಿರುದ್ಧ ಪ್ರಕರಣ ದಾಖಲಿಸಿದ್ದು ಕೋವಿಡ್ ಕಾರಣದಿಂದ ಕ್ವಾರಂಟೈನ್ ನಲ್ಲಿದ್ದ ಆರೋಪಿಯ ಬಂಧನ ವಿಳಂಬವಾಗಿದೆ.
ವಿದ್ಯಾರ್ಥಿನಿ ಜೂನಿಯರ್ ಕಾಲೇಜಿನಲ್ಲಿ ಇದ್ದ ಸಂದರ್ಭದಲ್ಲಿ ಪರಿಚಿತನಾಗಿದ್ದ ಕಾನ್ಸ್ ಟೇಬಲ್ ತನ್ನನ್ನು ಮದುವೆಯಾಗುವಂತೆ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆತ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.
ವಿದ್ಯಾರ್ಥಿನಿಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಆತನಿಗೆ ವಿಡಿಯೋ ಕಳುಹಿಸಿದ್ದರಿಂದ ಮದುವೆ ರದ್ದಾಗಿದೆ. ಇದಾದ ಬಳಿಕ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.