
ಆನ್ಲೈನ್ ಗೇಮಿಂಗ್ ಅನ್ನೇ ಜೀವನ ಮಾಡಿಕೊಂಡಿರುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಗೇಮಿಂಗ್ ಆಡಿಕೊಂಡೇ ಭರ್ಜರಿ ದುಡ್ಡು ಮಾಡಿಕೊಳ್ಳುವ ಇರಾದೆಯೂ ಜನರಿಗೆ ಇದೆ.
ಇವರಿಗೆ ಬೇಕಾಗಿರೋದು ಇಷ್ಟೇ — ಹೆಚ್ಚಿನ ಆಟಗಳು, ಅಪ್‌ಗ್ರೇಡ್‌ಗಳು ಹಾಗೂ ದುಡ್ಡು.
ಆದರೆ ಎಲ್ಲಾ ಗೇಮರ್ ಗಳಿಗೂ ಗೇಮಿಂಗ್‌ನಿಂದ ದುಡ್ಡು ಮಾಡಿಕೊಳ್ಳಲು ಸಾಕಷ್ಟು ಕೌಶಲ್ಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳು ಇರುವುದಿಲ್ಲ. ಆದರೆ ಈ ವಿಚಾರದಲ್ಲಿ ಪಾರಂಗತರಾದವರು ಕೈಯ್ಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಗಳನ್ನು ಹಿಡಿದುಕೊಂಡೇ ಭಯಂಕರ ದುಡ್ಡು ಮಾಡುತ್ತಾರೆ.
ಸೋನಿಯ ಪ್ಲೇಸ್ಟೇಷನ್ ತನ್ನ ವಿಡಿಯೋ ಗೇಮ್‌ಗಳನ್ನು ಆಡಿ ಪಾರಂಗತರಾದವರಿಗೆ ಸಂಭಾವನೆ ಕೊಡಲು ಹೈರಿಂಗ್ ಮಾಡಿಕೊಳ್ಳಲು ಮುಂದಾಗಿದೆ. ಆನ್ಲೈನ್ ಗೇಮ್‌ನಲ್ಲಿ ಪಂಟರಾದವರು ಹಾಗೂ ಗೇಮ್ ಡೆವಲೆಪ್‌ಮೆಂಟ್ ಬಗ್ಗೆ ತಿಳಿದವರು ಅರ್ಜಿ ಹಾಕಬಹುದಾಗಿದೆ. ಆದರೆ ಇಲ್ಲಿ ಒಂದು ಕಂಡೀಷನ್ ಇದ್ದು, ಈ ಬಗ್ಗೆ ಕನಸು ಕಾಣುತ್ತಿರುವ ಮನಸ್ಸುಗಳಿಗೆ ತಣ್ಣೀರು ಎರಚಿದಂತೆ ಆಗಿದೆ. ಅದೇನೆಂದರೆ, ಅರ್ಜಿದಾರರು ರಷ್ಯನ್, ಪೋರ್ಚುಗೀಸ್ ಹಾಗು ಅರೇಬಿಕ್ ಭಾಷೆಗಳ ಮೇಲೆ ಹಿಡಿತ ಹೊಂದಿರಬೇಕು.