
ಖ್ಯಾತ ಉದ್ಯಮಿ ಆನಂದ ಮಹಿಂದ್ರಾ ಅವರು ಟ್ವಿಟರ್ ನಲ್ಲಿ ಬಹಳ ಆಸಕ್ತಿದಾಯಕ ಹಾಗೂ ಹಾಸ್ಯಭರಿತ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನವೀನ ವಿಡಿಯೋ ಟ್ವೀಟ್ ಮಾಡುವ ಮೂಲಕ ಅವರು ತಮ್ಮ ಫಾಲೋವರ್ ಗಳನ್ನು ಹೆಚ್ಚು ಬ್ಯುಸಿ ಇರಿಸುತ್ತಾರೆ.
ಮಹಿಂದ್ರಾ ಗ್ರೂಪ್ ನ ಅಧ್ಯಕ್ಷರಾಗಿರುವ ಆನಂದ್ ಅವರು ನಿನ್ನೆ ಉಲ್ಲಾಸದಾಯಕವಾದ ಫೋಟೋವೊಂದನ್ನು ಅಷ್ಟೇ ಉತ್ತಮ ಕ್ಯಾಪ್ಶನ್ ನೊಂದಿಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಸೋಮವಾರವನ್ನು ನಗುವಿನೊಂದಿಗೆ ಅಂತ್ಯ ಮಾಡಿ, ನನಗೆ ಮೊದಲು ಈ ಫೋಟೋ ಯಾವುದೇ ಕ್ಯಾಪ್ಶನ್ ಇಲ್ಲದೇ ಬಂತು. ನಂತರ ಇನ್ನೊಬ್ಬ ಸ್ನೇಹಿತ ಕ್ಯಾಪ್ಶನ್ ಕೊಟ್ಟು ಕಳುಹಿಸಿದ. ನಾನು ಈ ಕೊಠಡಿಯನ್ನು ನನ್ನ ಅತ್ತೆಗೆ ನೀಡುತ್ತೇನೆ ಎಂದು ಬರೆದಿದ್ದ” ಎಂದು ಆನಂದ ಮಹಿಂದ್ರಾ ಹೇಳಿಕೊಂಡಿದ್ದಾರೆ.
ಹಾಗಾದ್ರೆ ಫೋಟೋದಲ್ಲಿ ಏನಿದೆ…? ಕೊಠಡಿಯೊಂದರ ಬಾಗಿಲು ತೆರೆದಿರುವ ಫೋಟೋ ಇದಾಗಿದೆ. ವಿಶೇಷ ಎಂದರೆ, ಬಾಗಿಲಿನ ಹೊರಗೆ ಕಾಲಿಡಲು ಜಾಗವೇ ಇಲ್ಲ. ಸೀದ ಮೆಟ್ಟಿಲುಗಳೇ ಪ್ರಾರಂಭವಾಗಿವೆ. ಅಕಸ್ಮಾತ್ ನೋಡದೇ ಕಾಲಿಟ್ಟರೆ ಉರುಳಿ ಬೀಳುವುದು ಗ್ಯಾರಂಟಿ. ಕೊಠಡಿ ಬಾಗಿಲು ಹಾಕಿದರೆ ಮಾತ್ರ ಮೆಟ್ಟಿಲಲ್ಲಿ ಓಡಾಡಬಹುದು. ಬಾಗಿಲು ತೆರೆದರೆ ಮೆಟ್ಟಿಲಿನ ಓಡಾಟ ಬಂದ್. ಈ ವಿಚಿತ್ರ ವಿನ್ಯಾಸದ ಕೊಠಡಿ ಎಲ್ಲಿದೆ ಎಂದು ಎಲ್ಲರೂ ಅಚ್ಚರಿಯಿಂದ ಹುಡುಕುವಂತೆ ಮಾಡಿದೆ ಈ ಫೋಟೋ.