ಕೊರೊನಾ ಸೋಂಕಿನಿಂದಾಗಿ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಹಾಗಾಗಿ ಕೆಲಸ ಹುಡುಕುವ ಕಾರ್ಯ ಮುಂದುವರೆದಿದೆ. ಆದ್ರೆ ಈ ಸಂದರ್ಭದಲ್ಲಿ ನೌಕರಿ ಸಿಗುವುದು ಸುಲಭವಲ್ಲ. ಮನೆಯಲ್ಲೇ ಕುಳಿತು ಗಳಿಕೆ ಮಾಡುವ ಸಾಕಷ್ಟು ಕ್ಷೇತ್ರಕ್ಕೆ ಈಗ ಬೇಡಿಕೆ ಬಂದಿದೆ. ಆನ್ಲೈನ್ ನಲ್ಲಿ ಕೆಲಸ ಮಾಡಿ ಕೈತುಂಬ ಗಳಿಸುವ ಪ್ಲಾನ್ ಇಲ್ಲಿದೆ.
ಇನ್ಸ್ಟಾಗ್ರಾಮ್ ಮಾರ್ಕೆಟಿಂಗ್ : ಫೋಟೋಗಳು ಮತ್ತು ವಿಡಿಯೊಗಳ ಕ್ಷೇತ್ರದಲ್ಲಿ ಅನುಭವವಿದ್ದರೆ ಇನ್ಸ್ಟಾಗ್ರಾಮ್ ಮಾರ್ಕೆಟಿಂಗ್ ನಿಮಗೆ ಉತ್ತಮ ಆಯ್ಕೆ. ಈ ದಿನಗಳಲ್ಲಿ ಜನರು ತಮ್ಮ ಇನ್ಸ್ಟಾಗ್ರಾಮ್ ನಿಂದ ಉತ್ಪನ್ನವನ್ನು ಪ್ರಚಾರ ಮಾಡುವುದಲ್ಲದೆ, ಫೋಟೋಗಳನ್ನು ಹಂಚಿಕೊಳ್ಳುತ್ತ ಗಳಿಕೆ ಮಾಡ್ತಿದ್ದಾರೆ.
ಫ್ರಿಲಾನ್ಸ್ : ಮನೆಯಲ್ಲಿ ಕುಳಿತು ಹಣ ಸಂಪಾದಿಸುವ ಸ್ವತಂತ್ರ ಮಾರ್ಗ ಇದು. ಕೊರೊನಾಗಿಂತ ಮೊದಲೂ ಜನರು ಈ ಕೆಲಸ ಮಾಡಿ ಸಾಕಷ್ಟು ಗಳಿಸುತ್ತಿದ್ದರು. ಅನೇಕ ವೆಬ್ಸೈಟ್ ಗಳಿಗೆ ಅವ್ರ ಅಗತ್ಯಕ್ಕೆ ತಕ್ಕಂತೆ ಲೇಖನ, ಟ್ರಾನ್ಸ್ ಲೇಷನ್ ಮಾಡಿ ಗಳಿಸಬಹುದು.
ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಕನ್ಸಲ್ಟೆಂಟ್ : ಸೋಶಿಯಲ್ ಮೀಡಿಯಾ ಈ ದಿನಗಳಲ್ಲಿ ಸಮಯ ಕಳೆಯುವ, ಚರ್ಚೆಯ ವೇದಿಕೆ ಮಾತ್ರವಲ್ಲ. ಸಂಭಾವನೆಯ ಮಾರ್ಗವಾಗಿದೆ. ಯಾವುದೇ ಉತ್ಪನ್ನದ ಪ್ರಚಾರದ ವಿಷ್ಯ ಬಂಗಾರ ಕಂಪನಿಗಳಿಗೆ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಸಲಹೆಗಾರರ ಅಗತ್ಯವಿರುತ್ತದೆ. ಕಂಪನಿಗಳಿಗೆ ನೆರವಾಗಿ ನೀವು ಹಣ ಗಳಿಸಬಹುದು.
ಐಟಿ ತಜ್ಞ : ಪ್ರತಿ ಕಂಪನಿಗೆ ಐಟಿ ತಜ್ಞರ ಅಗತ್ಯವಿದೆ. ಈ ಕ್ಷೇತ್ರದಲ್ಲಿ ನೀವು ಪರಿಣಿತರಾಗಿದ್ದರೆ ಕಂಪನಿಗಳ ಜೊತೆ ಕೆಲಸ ಮಾಡಿ ಹಣ ಗಳಿಸಬಹುದು. ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಫ್ರಿಲಾನ್ಸರ್ ರೀತಿಯಲ್ಲಿ ಕೆಲಸ ಮಾಡಬಹುದು.
ಗ್ರಾಫಿಕ್ ಡಿಸೈನರ್ : ಸ್ವತಂತ್ರವಾಗಿ ಅಥವಾ ಅರೆಕಾಲಿಕ ಗ್ರಾಫಿಕ್ ಡಿಸೈನರ್ ಆಗಿ ಸಹ ಕೆಲಸ ಮಾಡಬಹುದು. ಅನೇಕ ವೆಬ್ ಸೈಟ್ ಗಳು ಗ್ರಾಫಿಕ್ ಡಿಸೈನರ್ ಗಳಿಗೆ ಕೆಲಸ ನೀಡ್ತಿವೆ. ಅಲ್ಲಿಂದ ಕೆಲಸ ಪಡೆದು ಮನೆಯಲ್ಲಿಯೇ ಗ್ರಾಫಿಕ್ ಡಿಜೈನ್ ಮಾಡಿ ಗಳಿಸಬಹುದು.
ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರು ಮನೆಯಲ್ಲಿ ಖಾಲಿ ಕುಳುತುಕೊಳ್ಳುವ ಬದಲು ಕೌಶಲ್ಯ ವೃದ್ಧಿಸಿಕೊಳ್ಳಬಹುದು. ಆನ್ಲೈನ್ ನಲ್ಲಿ ಭಾಷೆ ಕಲಿಕೆಯಿಂದ ಹಿಡಿದು ಎಲ್ಲ ರೀತಿಯ ಕಲಿಕೆ ಲಭ್ಯವಿದ್ದು, ನೀವು ಮನೆಯಲ್ಲಿಯೇ ಕುಳಿತು ಕಲಿತು ನಂತ್ರ ಆ ಕ್ಷೇತ್ರದಲ್ಲಿ ಸಂಪಾದನೆ ಶುರು ಮಾಡಬಹುದು.