2019-20ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವಾಗಿಲ್ಲವೆಂದು ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷಗಳಲ್ಲಿ 2000 ರೂಪಾಯಿ ನೋಟಿನ ಚಲಾವಣೆ ಕೂಡ ಕಡಿಮೆಯಾಗಿದೆ.
ಮಾರ್ಚ್ 2018 ರ ಅಂತ್ಯದ ವೇಳೆಗೆ 2000 ರೂಪಾಯಿ ನೋಟಿನ ಚಲಾವಣೆ 33,632 ಲಕ್ಷವಿತ್ತು. ಇದು 2019 ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷ ಕ್ಕೆ ಇಳಿದಿತ್ತು. ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ 2020 ರ ಮಾರ್ಚ್ ಅಂತ್ಯದ ವೇಳೆಗೆ 2000 ರೂಪಾಯಿ ನೋಟುಗಳ ಚಲಾವಣೆ 27,398 ಲಕ್ಷಕ್ಕೆ ಇಳಿದಿದೆ ಎಂದಿದೆ.
500 ಹಾಗೂ 200 ರೂಪಾಯಿ ನೋಟಿನ ಚಲಾವಣೆ ಹೆಚ್ಚಾಗಿದೆ ಎಂದು ಆರ್.ಬಿ.ಐ. ಇದೇ ವೇಳೆ ತಿಳಿಸಿದೆ. ಆರ್.ಬಿ.ಐ. ವರದಿ ನಂತ್ರ 2000 ರೂಪಾಯಿ ರದ್ದಾಗ್ತಿದೆ ಎಂಬ ಸುದ್ದಿ ಹರಡುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ 2 ಸಾವಿರ ರೂಪಾಯಿ ನೋಟು ಬಂದ್ ಮಾಡುವ ಯೋಚನೆ ಸರ್ಕಾರಕ್ಕಿಲ್ಲವೆಂದು ಅವ್ರು ಹೇಳಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಆರ್ಥಿಕ ಸುಧಾರಣೆ ಹಾದಿಗೆ ಮರಳಲು ಭಾರತಕ್ಕೆ ಸಮಗ್ರ ಸುಧಾರಣೆಗಳು ಬೇಕಾಗುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಈ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಸಂಭಾವ್ಯ ಬೆಳವಣಿಗೆಯ ದರ ಕಡಿಮೆಯಾಗಲಿದೆ ಎಂದು ಕೇಂದ್ರ ಬ್ಯಾಂಕ್ ಎಚ್ಚರಿಸಿದೆ.