ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಚೋತಿ ಕೋಥಿಯಾ ಗ್ರಾಮದ ನಿವಾಸಿ ಅರವತ್ತೈದು ವರ್ಷದ ಲೀಲಾದೇವಿಗೆ ಆರು ಮಕ್ಕಳು. ಕಿರಿಯ ಮಗನ ವಯಸ್ಸು 21 ವರ್ಷ. ಆದರೆ, ಮುಷಾರಿ ಬ್ಲಾಕ್ ಸಮುದಾಯ ಆರೋಗ್ಯ ಕೇಂದ್ರದ ದಾಖಲೆಗಳ ಪ್ರಕಾರ, ಕಳೆದ 18 ತಿಂಗಳಲ್ಲಿ ಲೀಲಾದೇವಿ 13 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇದೊಂದು ದೊಡ್ಡ ಆರೋಗ್ಯ ಹಗರಣವಾಗಿದೆ. ಜನನಿ ಸುರಕ್ಷಾ ಯೋಜನೆಯಡಿ ಸರ್ಕಾರ ನೀಡುವ ಹಣವನ್ನು 18 ಮಹಿಳೆಯರಿಗೆ ಹಂಚಲಾಗಿದೆ. ಎಲ್ಲ ಮಹಿಳೆಯರ ವಯಸ್ಸು 60 ವರ್ಷದ ಆಸುಪಾಸಿನಲ್ಲಿದ್ದು ಎಲ್ಲ ಮಹಿಳೆಯರಿಗೂ 18 ವರ್ಷದಿಂದ ಮಕ್ಕಳಿಲ್ಲ. ಆದ್ರೆ ಮಕ್ಕಳಾಗಿವೆ ಎಂಬ ದಾಖಲೆ ನೀಡಿ ಹಣ ಪಡೆಯಲಾಗಿದೆ.
ಮಹಿಳೆಯರ ಖಾತೆಗೆ ಹಣ ಹಾಕಿ ನಂತ್ರ ಅದನ್ನು ವಾಪಸ್ ಪಡೆಯಲಾಗಿದೆ. ಒಬ್ಬ ಮಹಿಳೆಯ ಖಾತೆಗೆ ವರ್ಷಕ್ಕೆ 1400 ರೂಪಾಯಿ ಪಾವತಿ ಮಾಡಲಾಗ್ತಿದೆ. ಕಳೆದ ತಿಂಗಳು ಆಗಸ್ಟ್ 3 ರಂದು 11,400 ರೂಪಾಯಿಗಳನ್ನು ಖಾತೆಗೆ ಕಳುಹಿಸಲಾಗಿದೆ. ಆದರೆ ಹಣ ಶಾಂತಿ ದೇವಿಗೆ ಒಮ್ಮೆ ಕೂಡ ಸಿಕ್ಕಿಲ್ಲ. ಕ್ರೆಡಿಟ್ ಮಾಡಿದ ಮರುದಿನವೇ ಅವರ ಖಾತೆಯಿಂದ ಹಣವನ್ನು ಹಿಂಪಡೆಯಲಾಗಿದೆ. ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ ನೀಡಿದ್ದಾರೆ.