ನವದೆಹಲಿ: ಕೊರೊನಾ ಲಸಿಕೆಯನ್ನು ಸಿದ್ಧಪಡಿಸಿ ಎಲ್ಲರಿಗೂ ಲಭಿಸುವಂತೆ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ.
3 ಸಾವಿರ ಕೋಟಿ ರೂಪಾಯಿ ಮಿಷನ್ ಕೋವಿಡ್ ಸುರಕ್ಷಾ ನಿಧಿ ಸ್ಥಾಪನೆ ಮಾಡಲು ಜೈವಿಕ ತಂತ್ರಜ್ಞಾನ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಬಯೋಟೆಕ್ನಾಲಜಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದ್ದು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಿಂದ ಹಿಡಿದು ಲಸಿಕೆ ಉತ್ಪಾದನೆ, ಪೂರೈಕೆ ಮತ್ತು ಜನರಿಗೆ ವಿತರಣೆ ಮಾಡುವವರೆಗಿನ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ದೇಶದಲ್ಲಿ ಕನಿಷ್ಠ 6 ಲಸಿಕೆಗಳ ಅಭಿವೃದ್ಧಿಪಡಿಸುವುದರಿಂದ ಹಿಡಿದು ಮಾರುಕಟ್ಟೆಗೆ ಬಿಡುಗಡೆಯಾಗುವವರೆಗಿನ ಕಾರ್ಯಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. 3000 ಕೋಟಿ ರೂಪಾಯಿ ಮಿಷನ್ ಕೋವಿಡ್ ಸುರಕ್ಷಾ ನಿಧಿ ಸ್ಥಾಪನೆ ಮಾಡಲು ಯೋಜಿಸಿದ್ದು ಇದಿನ್ನು ಆರಂಭಿಕ ಹಂತದಲ್ಲಿ ಇದೆ ಎಂದು ಹೇಳಲಾಗಿದೆ.