ಈ ದೊಡ್ಡ ಬೆಕ್ಕುಗಳೇ ಹಾಗೆ. ಪೊದೆಯ ಅಡಿಯಲ್ಲಿ ಸ್ವಲ್ಪವೂ ಸದ್ದಾಗದಂತೆ ಅಡಗಿ ಕುಳಿತುಕೊಂಡು, ಸುತ್ತಲಿರುವ ಜೀವಿಗಳಿಗೆ ತಮ್ಮ ಇರುವಿಕೆಯ ಸುಳಿವನ್ನೇ ಕೊಡದಂತೆ ಇರುವುದು ಅವುಗಳಿಗೆ ಕರಗತ.
ವನ್ಯಜೀವಿ ಛಾಯಾಗ್ರಾಹಕ ಸಾಗರ್ ದಾಮ್ಲೆ ಸೆರೆ ಹಿಡಿದಿರುವ ಹುಲಿಯೊಂದರ ಎರಡು ಚಿತ್ರಗಳನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ದಾಮ್ಲೆ. ಮೊದಲ ಚಿತ್ರವನ್ನು ಕಣ್ಣಳತೆ ದೂರದಿಂದ ಸೆರೆ ಹಿಡಿಯಲಾಗಿದ್ದು, ಇದರಲ್ಲಿ ಹುಲಿಯನ್ನು ಪತ್ತೆ ಮಾಡಲು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು.
ಎರಡನೇ ಚಿತ್ರವನ್ನು ಕ್ಯಾಮೆರಾ ಲೆನ್ಸ್ ಝೂಮ್ ಮಾಡಿ ಸೆರೆ ಹಿಡಿದಿದ್ದು, ಹುಲಿಯನ್ನು ಇನ್ನಷ್ಟು ಸ್ಪಷ್ಟವಾಗಿ ನೋಡಬಹುದಾಗಿದೆ. ಹುಲಿರಾಯನ ಈ ಎರಡೂ ಚಿತ್ರಗಳನ್ನು ಬಂಡೀಪುರ ಹುಲಿ ಸಂರಕ್ಷಣಾ ಧಾಮದಲ್ಲಿ ಸೆರೆ ಹಿಡಿಯಲಾಗಿದೆ.