ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ನಲ್ಲಿ ದಿನಕ್ಕೊಂದು ಚಿತ್ರ – ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಈ ಪ್ರಕೃತಿ ವಿಸ್ಮಯದ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ.
ಹೌದು, ರಷ್ಯಾದ ಗಗನಯಾತ್ರಿ ಇವಾನ್ ವಾಗ್ನೆರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು, ಅವರು ಅಲ್ಲಿಂದ ವಿಡಿಯೊ ಒಂದನ್ನು ಶೇರ್ ಮಾಡಿದ್ದಾರೆ. ಒಂದು ನಿಮಿಷದ ಟೈಮ್ ಲ್ಯಾಪ್ಸ್ನ ಈ ವಿಡಿಯೊದಲ್ಲಿ ಇದ್ದಕ್ಕಿದ್ದಂತೆ ಒಂದು ಬೆಳಕು ಕಾಣಿಸಿಕೊಂಡು ಹೋಗಿದೆ. ವಿಡಿಯೋದಲ್ಲಿ ಕಾಣಿಸಿರುವ ಈ ಬೆಳಕು ಅಥವಾ ವಸ್ತು ಏನು ಎನ್ನುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇದನ್ನು ಕೆಲವರು ಅನ್ಯಗ್ರಹ ಜೀವಿ ಎಂದು ಕರೆದರೆ, ಇನ್ನು ಕೆಲವರು ಉಪಗ್ರಹವೆಂದು ವಾದಿಸಿದ್ದಾರೆ. ಈ ಬೆಳಕಿನ ವಸ್ತು ಏನು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗದಿದ್ದರೂ, ನೆಟ್ಟಿಗರು ಮಾತ್ರ ಈ ಪ್ರಕೃತಿ ವಿಶಿಷ್ಠವನ್ನು ನೋಡಿ ಆನಂದಿಸಿದ್ದಾರೆ. ಈ ವಿಡಿಯೋವನ್ನು 1.84 ಲಕ್ಷ ಮಂದಿ ವೀಕ್ಷಿಸಿದ್ದು, ಎಂಟು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿ, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.