alex Certify BIG NEWS: ಮಾರ್ಗಸೂಚಿ ಉಲ್ಲಂಘನೆ, ಗೂಗಲ್ ಪೇ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾರ್ಗಸೂಚಿ ಉಲ್ಲಂಘನೆ, ಗೂಗಲ್ ಪೇ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನೋಟಿಸ್

ನವದೆಹಲಿ: ಮಾರ್ಗಸೂಚಿ ಉಲ್ಲಂಘನೆ ಆರೋಪದ ಮೇಲೆ ಗೂಗಲ್ ಪೇ ವಿರುದ್ಧ ಕ್ರಮಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗೆ ನೋಟಿಸ್ ಜಾರಿ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಗೂಗಲ್ ಪೇ ಉಲ್ಲಂಘಿಸಿದ ಆರೋಪ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ. ದತ್ತಾಂಶ ಹಂಚಿಕೆ ಸಂಗ್ರಹಣೆ ಮೊದಲಾದ ಮಾಹಿತಿ ನಿಯಮಗಳನ್ನು ಗೂಗಲ್ ಪೇ ಉಲ್ಲಂಘಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಯುಪಿಐ ವ್ಯವಸ್ಥೆಯಡಿ ಅಪ್ಲಿಕೇಶನ್ನಲ್ಲಿ ಡೇಟಾ ಸೇರಿದಂತೆ ಯಾವುದೇ ವ್ಯಕ್ತಿಯೊಂದಿಗೆ ಮಾಹಿತಿ ಹಂಚಿಕೊಳ್ಳದಂತೆ ಮನವಿದಾರರು ಕೋರಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ನ್ಯಾಯಪೀಠವು ಪ್ರತಿಕ್ರಿಯೆ ನೀಡಲು ಸೂಚಿಸಿ ಸೆಪ್ಟಂಬರ್ 24 ರಂದು ಹೆಚ್ಚಿನ ವಿಚಾರಣೆಗೆ ತೀರ್ಮಾನಿಸಿದೆ.

ಅರ್ಜಿದಾರರಾದ ಅಭಿಷೇಕ್ ಶರ್ಮಾ ಅವರು, ಅನ್ವಯಿಸುವ ಕಾನೂನುಗಳ ಗಂಭೀರ ಉಲ್ಲಂಘನೆಯ ಕಾರಣದಿಂದ ಗೂಗಲ್ ಪೇ ವಿರುದ್ಧ ಕ್ರಮಕೈಗೊಳ್ಳಲು ಮತ್ತು ದಂಡ ವಿಧಿಸಲು ಆರ್.ಬಿ.ಐ.ಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಗೂಗಲ್ ಇಂಡಿಯಾ ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡು ಮೊಬೈಲ್ ಪಾವತಿ ಸೇವೆಯಾದ ತೇಜ್ ಆರಂಭಿಸಿದ್ದು ನಂತರದಲ್ಲಿ ಅದು ಗೂಗಲ್ ಪೇ ಆಗಿ ಬದಲಾಗಿ ಯುಪಿಐ ಪಾವತಿಯನ್ನು ಸುಗಮಗೊಳಿಸುವ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಆಗಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಅಫ್ ಇಂಡಿಯ ಗೂಗಲ್ ಪೇಯನ್ನು ನಿಯಂತ್ರಿಸುತ್ತದೆ. ಇದು ಪಾವತಿ ಸೇವಾ ಪೂರೈಕೆದಾರರಿಗೆ(PSP) ಬ್ಯಾಂಕ್ ಗಳಾಗಿ ಮತ್ತು ಯುಪಿಐ ನೆಟ್ವರ್ಕ್ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಅಪ್ಲಿಕೇಶನ್ ಗಳಿಗೆ(TPA) ಅನುಮತಿ ನೀಡುವ ಜವಾಬ್ದಾರಿ ಹೊಂದಿದೆ ಎಂದು ಹೇಳಲಾಗಿದೆ.

ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ವೈಯಕ್ತಿಕ ಸೂಕ್ಷ್ಮ ಬಳಕೆದಾರರ ಡೇಟಾ ಹಂಚಿಕೊಳ್ಳುವ ಮೂಲಕ ಗೂಗಲ್ ಪೇ, ಯುಪಿಐ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...