ಬೆಂಗಳೂರು: ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಕೌನ್ಸೆಲಿಂಗ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಿಂದ ದಾಖಲೆಗಳ ಪರಿಶೀಲನೆ ನಡೆಯಲಿದೆ.
ಸೆಪ್ಟಂಬರ್ 2 ರಿಂದ 27 ರವರೆಗೆ ದಾಖಲೆಗಳ ಸಲ್ಲಿಕೆ ಮತ್ತು ಪರಿಶೀಲನೆ ನಡೆಯಲಿದ್ದು ಈ ಬಾರಿ ಎಲ್ಲವೂ ಆನ್ಲೈನ್ ನಲ್ಲಿ ಸಲ್ಲಿಸಬೇಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೋಗುವ ಅಗತ್ಯವಿಲ್ಲ. ಆನ್ಲೈನ್ ನಲ್ಲೇ ದಾಖಲೆಯನ್ನು ಅಪ್ಲೋಡ್ ಮಾಡಲು ಸೂಚನೆ ನೀಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಕುರಿತಾಗಿ ಮಾಹಿತಿ ನೀಡಿದ್ದು ಸೆಪ್ಟಂಬರ್ 2 ರಿಂದ 27 ರವರೆಗೆ ದಾಖಲೆಗಳ ಸಲ್ಲಿಕೆ ಮತ್ತು ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.