ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಸುಶಾಂತ್ ಸಾವಿನ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬರ್ತಿದೆ. ಈ ಮಧ್ಯೆ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಬಗ್ಗೆ ಆಘಾತಕಾರಿ ಸಂಗತಿ ಹೊರಗೆ ಬಂದಿದೆ. ದಿಶಾ ಆತ್ಮಹತ್ಯೆ ನಂತ್ರವೂ ಕೆಲವು ದಿನ ಆಕೆ ಫೋನ್ ಬಳಸಲಾಗಿದೆಯಂತೆ. ಅನೇಕ ಕರೆಗಳನ್ನು ಮಾಡಲಾಗಿದೆಯಂತೆ.
ದಿಶಾ ಸಾಲಿಯನ್ ಹಾಗೂ ಸುಶಾಂತ್ ಸಾವಿಗೆ ಸಂಬಂಧವಿದೆ ಎಂದು ಅನೇಕ ದಿನಗಳಿಂದ ಹೇಳಲಾಗ್ತಿದೆ. ಆದ್ರೆ ಇದನ್ನು ದಿಶಾ ಪಾಲಕರು ತಳ್ಳಿ ಹಾಕಿದ್ದಾರೆ. ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ದಿಶಾ ಆತ್ಮಹತ್ಯೆಗೂ ಮುನ್ನ ಸುಶಾಂತ್ ಜೊತೆ ಮಾತನಾಡಿದ್ದಳಂತೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸುಶಾಂತ್ ಮಾಹಿತಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ.
ದಿಶಾ ಫೋನ್ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಆತ್ಮಹತ್ಯೆ ನಂತ್ರ ಪೊಲೀಸರು ದಿಶಾ ಫೋನ್ ಏಕೆ ವಶಕ್ಕೆ ಪಡೆದಿರಲಿಲ್ಲ ಎಂಬ ಪ್ರಶ್ನೆಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.