ಕೊರೊನಾ ಹಾವಳಿ ರಾಜ್ಯದಲ್ಲಿ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರ ಜೊತೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ಕೂಡ ಕಳೆದ ಒಂದು ತಿಂಗಳಿನಿಂದ ಏರಿಕೆಯಾಗಿದೆ.
ಇತ್ತ ರಾಜ್ಯದ್ದೇ ಒಂದು ಲೆಕ್ಕವಾದರೆ ಇನ್ನು ಬೆಂಗಳೂರಿನದ್ದು ಮತ್ತೊಂದು ಲೆಕ್ಕ. ಪ್ರತಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ 2 ಸಾವಿರ ಗಡಿ ದಾಟುತ್ತಿದೆ ಸೋಂಕಿತರ ಸಂಖ್ಯೆ. ಆದರೆ ಒಂದು ಸಮಾಧಾನಕರ ಸಂಗತಿ ಎಂದರೆ ಕಳೆದ ವಾರದಲ್ಲಿ ಸೋಂಕಿತರಿಗಿಂತ ಡಿಸ್ಚಾರ್ಜ್ ಆಗುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹಾಗೆಯೇ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುತ್ತಿರುವುದು ಸೋಂಕಿತರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿಸಿದೆ. ಇನ್ನು ಸೋಂಕಿತರು ಹೆಚ್ಚಾಗುವುದಕ್ಕೆ ಕಾರಣ ಪ್ರತಿ ನಿತ್ಯ ಟೆಸ್ಟಿಂಗ್ಗಳನ್ನು ಹೆಚ್ಚಿಸಲಾಗಿದೆ.
ಇನ್ನು ನಿನ್ನೆಯ ಅಂಕಿ ಅಂಶವನ್ನು ನೋಡೋದಾದರೆ ನಗರದಲ್ಲಿ ನಿನ್ನೆ 2126 ಹೊಸ ಪ್ರಕರಣಗಳು ಪತ್ತೆಯಾಗಿವೆ. 1468 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ನಗರದಲ್ಲಿ ಅತೀ ಕಡಿಮೆ ಅಂದರೆ 5 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.