ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ರೀತಿಯ ಹವ್ಯಾಸಗಳಿವೆ. ಕೆಲವರಿಗೆ ಕಾಯಿನ್ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಇಷ್ಟವಾದರೆ ಮತ್ತೆ ಕೆಲವರಿಗೆ ತಾವು ಪ್ರಯಾಣಿಸಿದ ದೇಶಗಳ ನಾಣ್ಯಗಳನ್ನು ಕಲೆಕ್ಟ್ ಮಾಡುವುದು ಇಷ್ಟವಾಗುತ್ತದೆ.
ಎಮಾದ್ ಪರ್ಚಾ ಹೆಸರಿನ ಟ್ರಾವಲರ್ ಒಬ್ಬರು ಜಗತ್ತಿನ ವಿವಿಧ ದೇಶಗಳ ಕರೆನ್ಸಿ ನೋಟುಗಳಲ್ಲಿರುವ ಪ್ರಖ್ಯಾತ ಲ್ಯಾಂಡ್ ಮಾರ್ಕ್ಗಳಿಗೆ ಭೇಟಿ ಕೊಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
ತಮ್ಮ ಕರೆನ್ಸಿ ಪ್ರಾಜೆಕ್ಟ್ ಭಾಗವಾಗಿ ಎಮಾದ್ ಪರ್ಚಾ ಪಾಕಿಸ್ತಾನದ ಅನೇಕ ಭಾಗಗಳಿಗೆ ಭೇಟಿ ಕೊಟ್ಟಿದ್ದರು. ಇಲ್ಲಿನ ಮೊಹೆಂಜೋದಾರೂ, K2 ಪರ್ವತ ಸೇರಿದಂತೆ ಸಾಕಷ್ಟು ಪ್ರಸಿದ್ಧ ಜಾಗಗಳಿಗೆ ಭೇಟಿ ನೀಡಿದ್ದ ಪ್ರಚಾ, ನೋಟುಗಳೊಂದಿಗೆ ಆ ಜಾಗ/ಸ್ಮಾರಕವನ್ನು ಇಟ್ಟುಕೊಂಡು ಫೋಟೋಗಳನ್ನು ತೆಗೆದುಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
https://www.instagram.com/p/B01AJ4fHmMi/?utm_source=ig_embed
https://www.instagram.com/p/B6dnzIxHk4M/?utm_source=ig_embed