ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಪೋರ್ನ್ ನಟಿಗೆ ಸುಮಾರು 33 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿದೆ. ಯುಎಸ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಸ್ಟಾರ್ಮಿ ಡೇನಿಯಲ್ಸ್ ಎಂಬ ಪೋರ್ನ್ ನಟಿ ಟ್ರಂಪ್ ಜೊತೆ ಸಂಬಂಧ ಹೊಂದಿದ್ದೆ ಎನ್ನುತ್ತಿದ್ದಾಳೆ. ಆದ್ರೆ ಟ್ರಂಪ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ.
ಟ್ರಂಪ್ ವಿರುದ್ಧ 41 ವರ್ಷದ ಸ್ಟಾರ್ಮಿ ಡೇನಿಯಲ್ಸ್ ದೂರು ನೀಡಿದ್ದರು. ನಂತರ ದೂರನ್ನು ವಾಪಸ್ ಪಡೆದಿದ್ದರು. ಆದ್ರೆ ಇದಕ್ಕೆ ಖರ್ಚು ಮಾಡಿದ ಹಣವನ್ನು ಟ್ರಂಪ್ ನೀಡಬೇಕಿದೆ. ಟ್ರಂಪ್, ನಟಿಗೆ 33 ಲಕ್ಷ ರೂಪಾಯಿ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ. ತೀರ್ಪನ್ನು ಸ್ಟಾರ್ಮಿ ಪರ ವಕೀರಲು ಬಹಿರಂಗಪಡಿಸಿದ್ದಾರೆ. ನಂತರ ಸ್ಟಾರ್ಮಿ ಡೇನಿಯಲ್ಸ್ ಟ್ವೀಟ್ ಮಾಡಿದ್ದಾರೆ. ಇದು ನನ್ನ ಗೆಲುವು ಎಂದು ಸ್ಟಾರ್ಮಿ ಹೇಳಿದ್ದಾರೆ.
ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ ನಂತ್ರ ಸ್ಟಾರ್ಮಿ ಪುಸ್ತಕ ಬರೆದಿದ್ದರು. ಅದ್ರಲ್ಲಿ ಸ್ಟಾರ್ಮಿ,ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದರು.