ನವದೆಹಲಿ: ಕೊರೋನಾ ಸಂಕಷ್ಟದ ನಡುವೆ ಆರ್ಥಿಕತೆ ಪುನಶ್ಚೇತನಕ್ಕೆ ಒತ್ತು ನೀಡಿರುವ ಕೇಂದ್ರ ಸರ್ಕಾರ 20.97 ಲಕ್ಷ ಕೋಟಿ ರೂಪಾಯಿಯ ಆತ್ಮ ನಿರ್ಭರ್ ಭಾರತ್ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಈ ಯೋಜನೆಯಡಿ ಬ್ಯಾಂಕೇತರ ಹಣಕಾಸು ಕಂಪನಿ ಮತ್ತು ಗೃಹ ಹಣಕಾಸು ಕಂಪನಿಗಳಿಗೆ ಘೋಷಿಸಲಾದ ವಿಶೇಷ ನಗದು ಯೋಜನೆಯಡಿ 8,594 ಕೋಟಿ ರೂ. ಮಂಜೂರು ಮಾಡಲಾಗಿದೆ. ಹಣಕಾಸು ಮಂತ್ರಾಲಯ ಈ ಕುರಿತು ಮಾಹಿತಿ ನೀಡಿದ್ದು, 24 ಪ್ರಸ್ತಾವನೆ ಮಂಜೂರು ಮಾಡಲಾಗಿದೆ.
ಜುಲೈ 1 ರಂದು ಆರಂಭವಾದ ವಿಶೇಷ ನಗದು ಯೋಜನೆಯು ಬ್ಯಾಂಕೇತರ ಹಣಕಾಸು ಕಂಪನಿ ಮತ್ತು ಗೃಹ ಹಣಕಾಸು ಕಂಪನಿಯ ಅಲ್ಪಾವಧಿ ನಗದು ಸಮಸ್ಯೆಗಳ ನಿವಾರಿಸಲು ನೆರವಾಗಲಿದೆ ಎಂದು ಹೇಳಲಾಗಿದೆ.
30 ಸಾವಿರ ಕೋಟಿ ರೂಪಾಯಿ ವಿಶೇಷ ನಗದು ಯೋಜನೆ ಅನುಷ್ಠಾನಕ್ಕೆ ತಂದಿರುವ ಕುರಿತಾಗಿ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಗಸ್ಟ್ 21 ರವರೆಗೆ ಅನುಮೋದನೆಗೊಂಡ 8594 ಕೋಟಿ ರೂಪಾಯಿ 24 ಪ್ರಸ್ತಾವನೆಗಳನ್ನು ತೆರವುಗೊಳಿಸಿರುವುದಾಗಿ ಹೇಳಿದ್ದಾರೆ.
17 ಅರ್ಜಿಗಳ 3684 ಕೋಟಿ ರೂಪಾಯಿ ಬಾಕಿ ಇದೆ. ವಿತರಣೆ ಮಾಡಲಾದ ಮೊತ್ತದಲ್ಲಿ 2279 ಕೋಟಿ ರೂಪಾಯಿ ಹೆಚ್ಚಳವಾಗಿದೆ.