ಕೇರಳದ ಇಡುಕ್ಕಿಯಲ್ಲಿ ಭೂಕುಸಿತದಿಂದ ಕಣ್ಮರೆಯಾಗಿದ್ದ ತನ್ನ ಮಾಲಕಿ ಧನುಷ್ಕಾರನ್ನು ಪತ್ತೆ ಮಾಡಲು ನೆರವಾದ ಒಂದೂವರೆ ವರ್ಷದ ನಾಯಿ ಕುವಿಯನ್ನು ಅಲ್ಲಿನ ಪೊಲೀಸರು ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ.
ಇಲ್ಲಿನ ಪೆಟ್ಟಿಮುಡಿಯಲ್ಲಿ ತನ್ನನ್ನು ಸಾಕಿದ್ದ ಕುಟುಂಬದ ನಾಲ್ವರ ಮೃತದೇಹಗಳನ್ನು ಪತ್ತೆ ಮಾಡಲು ಕುವಿ ಹೋರಾಟ ಮಾಡುತ್ತಲೇ ಇತ್ತು. ಕೊನೆಗೂ ಭೂಕುಸಿತದ ಸ್ಪಾಟ್‌ನಿಂದ 4 ಕಿಮೀ ದೂರದಲ್ಲಿ ಇರುವ ನದಿಯೊಂದರಲ್ಲಿ ಧನುಷ್ಕಾರ ದೇಹವನ್ನು ಪತ್ತೆ ಮಾಡಲು ಕುವಿ ಯಶಸ್ವಿಯಾಗಿದೆ. ಆದರೆ ಇನ್ನೂ ಮೂವರ ದೇಹಗಳನ್ನು ಪತ್ತೆ ಮಾಡಲಾಗಿಲ್ಲ.
ಕೇರಳ ಪೊಲೀಸ್ ಶ್ವಾನ ತರಬೇತುದಾರ ಅಜಿತ್ ಮಾಧವನ್ ಕೆಲ ದಿನಗಳ ಹಿಂದೆ ಕುವಿಯನ್ನು ಭೇಟಿ ಮಾಡಿದ್ದಾರೆ. ತನ್ನ ಕುಟುಂಬಸ್ಥರನ್ನು ಕಳೆದುಕೊಂಡ ಶೋಕದಲ್ಲಿ ಹೊಟ್ಟೆಗೆ ಏನೂ ತಿನ್ನದೇ ಕೊರಗುತ್ತಿದ್ದ ಕುವಿಗೆ ಸಂತೈಸಿ ತಿನ್ನಲು ಪೌಷ್ಠಿಕ ಆಹಾರ ಕೊಟ್ಟ ಮಾಧವನ್, ನಾಯಿಯನ್ನು ದತ್ತು ಪಡೆದುಕೊಂಡಿದ್ದಾರೆ.
https://twitter.com/shiba_kurian/status/1296438871723577346?ref_src=twsrc%5Etfw%7Ctwcamp%5Etweetembed%7Ctwterm%5E1296438871723577346%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fdog-that-found-its-owners-body-after-kerala-landslide-to-be-adopted-by-police-squad-trainer-2807211.html