ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ನಡುವೆ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಿಕೊಂಡಿವೆ. ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲದ ಸಂಪರ್ಕ ಇಲ್ಲದೇ ಇರುವ ವಿದ್ಯಾಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಟ್ವಿಟ್ಟರ್ ಥ್ರೆಡ್ ಒಂದರಲ್ಲಿ, ಭಾರೀ ಮಳೆಯ ಕಾರಣ ಕರ್ನಾಟಕದ ವಿದ್ಯಾರ್ಥಿಯೊಬ್ಬ ಛತ್ರಿ ಕೆಳಗೆ ಕುಳಿತು ಓದಬೇಕಾದ ಪ್ರಸಂಗವೊಂದನ್ನು ಅರ್ಥಶಾಸ್ತ್ರ ಉಪನ್ಯಾಸಕ ಅರ್ಜುನ ಜಯದೇವ್ ಶೇರ್ ಮಾಡಿಕೊಂಡಿದ್ದಾರೆ.
ಈ ರೀತಿ ಸ್ಪೂರ್ತಿಯುತ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಿದ್ಯಾರ್ಥಿಗಳ ಮೂಡ್ ಲಿಫ್ಟ್ ಮಾಡಿರುವ ಅರ್ಜುನ್ ಜಯದೇವ್, ಅಧ್ಯಯನ ಪ್ರಕ್ರಿಯೆಯನ್ನು ಮುಂದುವರೆಸಲು ಇರುವ ಸಂಕಷ್ಟಗಳನ್ನು ಮೆಟ್ಟಿ ನಿಲ್ಲಲು ತಮ್ಮ ಕೈಯ್ಯಲ್ಲಿ ಸಾಧ್ಯವಾಗಿದ್ದನ್ನು ಮಾಡುವುದಾಗಿ ತಿಳಿಸಿದ್ದಾರೆ.