ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮುನ್ನ ಜನರು ತಮ್ಮ ಫೋಟೋಗಳಿಗೆ ಎಡಿಟಿಂಗ್ ಮಾಡುವುದು ಸರ್ವೇ ಸಾಮಾನ್ಯ. ಇನ್ನೂ ಕೆಲ ಆಸಕ್ತರು ತಮ್ಮ ಚಿತ್ರಗಳನ್ನು ಫೋಟೋಶಾಪ್‌ನಲ್ಲಿ ಎಡಿಟಿಂಗ್ ಮಾಡಿಸುತ್ತಾರೆ.
ಜೇಮ್ಸ್ ಫ್ರಿಡ್‌ಮನ್ ಹೆಸರಿನ ಫೊಟೋಶಾಪ್ ಪ್ರವೀಣನೊಬ್ಬ ಡಿಮ್ಯಾಂಡ್ ಮೇಲೆ ಜನರ ಫೋಟೋಗಳನ್ನು ಎಡಿಟ್ ಮಾಡುತ್ತಾ ಬಂದಿದ್ದಾನೆ. ತನ್ನ ಹಾಸ್ಯ ಪ್ರಜ್ಞೆ ಹಾಗೂ ಸಖತ್ ಕ್ರಿಯೇಟಿವಿಟಿ ಮೂಲಕ ಈತ ಅಂತರ್ಜಾಲದಲ್ಲಿ ಬಲೇ ಹೆಸರು ಮಾಡುತ್ತಿದ್ದಾನೆ.
ಫೋಟೋಶಾಪ್ ಮಾಸ್ಟರ್‌ಗೆ ಟ್ವಿಟ್ಟರ್‌ನಲ್ಲಿ 18 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 19 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಆತನ ಫೋಟೋಶಾಪಿಂಗ್ ಕೌಶಲ್ಯದ ಚಿತ್ರಗಳನ್ನು ನೀವೂ ಒಮ್ಮೆ ನೋಡಿ ಆನಂದಿಸಿ.