ಫೇಸ್ ಬುಕ್ ಪಕ್ಷಾತೀತವಾಗಿಲ್ಲ. ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಒಂದೇ ಒಂದು ಪಕ್ಷದ ಪರವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಕಾರಣ ಬಿಜೆಪಿ ಮುಖಂಡರ ಭಾಷಣ. ಇದಕ್ಕೆ ಸಂಬಂಧಿಸಿದಂತೆ ಇದೀಗ ಫೇಸ್ ಬುಕ್ ಇಂಡಿಯಾ ಸ್ಪಷ್ಟನೆಯನ್ನು ನೀಡಿದೆ. ನಾವು ಯಾವ ಪಕ್ಷದ ಪರವಾಗಿಯೂ ಇಲ್ಲ. ನಾವು ಪಕ್ಷಾತೀತವಾಗಿದ್ದೇವೆ ಎಂದು ಹೇಳಿದೆ.
ಹೌದು, ಇತ್ತೀಚೆಗೆ ಫೇಸ್ ಬುಕ್ ಮೇಲೆ ಬಂದ ಆರೋಪದ ವಿಚಾರ ರಾಜಕೀಯ ತಿರುವು ಪಡೆದ ಹಿನ್ನಲೆಯಲ್ಲಿ ಫೇಸ್‌ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಈ ಬಗ್ಗೆ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ನಾವು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಯಾವುದೇ ಪಕ್ಷದ ಪರ ಕೆಲಸ ಮಾಡಿಲ್ಲ. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ನೀವು ಹಂಚಿಕೊಳ್ಳಬಹುದು ಎಂದಿದ್ದಾರೆ.
ಹಾಗೆಯೇ ಯಾವುದೇ ಪ್ರಚೋದನೆಯಂತಹ ಪೋಸ್ಟ್ ಗಳನ್ನು ಹಾಕಿದರೆ ಅಂತಹ ಪೋಸ್ಟ್ ಗಳನ್ನು ಸಹಿಸುವುದಿಲ್ಲ ಹಾಗೂ ಅಂತಹ ಪೋಸ್ಟ್ ಗಳನ್ನು ಮುಲಾಜಿಲ್ಲದೆ ರಿಮೂವ್ ಮಾಡುತ್ತೇವೆ ಎಂದಿದ್ದಾರೆ.