ನಗರ ಪ್ರದೇಶದ ಮಿತಿಯಲ್ಲಿ ಅಪಾಯಕಾರಿ ರಾಸಾಯನಿಕಗಳ ಸಂಗ್ರಹವಿಟ್ಟುಕೊಂಡರೆ ಅದೆಂಥಾ ಅಪಾಯಕಾರಿ ಮುನ್ಸೂಚನೆ ಎಂದು ಬೈರೂತ್ ಬಾಂಬ್ ಸ್ಪೋಟದ ಘಟನೆಯಿಂದ ತಿಳಿದುಕೊಂಡಿದ್ದೇವೆ.
ಸ್ಫೋಟದ ವೇಳೆ ತೆಗೆದುಕೊಂಡ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಮದುವೆಯಾಗುತ್ತಿದ್ದ ಹುಡುಗಿಯೊಬ್ಬಳ ಫೋಟೋಶೂಟ್ ಹಾಗೂ ಮಡದಿಯ ಡೆಲಿವರಿಗೆ ಸಜ್ಜಾಗುತ್ತಿದ್ದ ತಂದೆಯೊಬ್ಬನ ವ್ಯಥೆ ಸೇರಿದಂತೆ ನಾನಾ ದೃಷ್ಟಿಕೋನಗಳಿಂದ ಈ ಸ್ಪೋಟದ ದೃಶ್ಯಾವಳಿಯನ್ನು ಗ್ರಹಿಸಿದ್ದಾಗಿದೆ.
ಈ ನತದೃಷ್ಟ ದಿನದಂದೇ ಎಡ್ಮಂಡ್ ಹಾಗೂ ಎಮ್ಯಾನುಯೆಲ್ ನಾಯ್ಸೆರ್ ಆಸ್ಪತ್ರೆಯೊಂದರಲ್ಲಿ ತಮ್ಮ ಮಗುವಿನ ಆಗಮನಕ್ಕೆ ಕಾತರರಾಗಿದ್ದರು. ನಾಯ್ಸೇರ್ಗೆ ಪ್ರಸವ ವೇದನೆ ಇದ್ದ ಕಾರಣ ಅವರಿಗೆ ಶುಶ್ರೂಷೆ ಜಾರಿಯಲ್ಲಿತ್ತು. ಇದೇ ವೇಳೆ ಸ್ಫೋಟ ಘಟಿಸಿದ್ದು, ಆಸ್ಪತ್ರೆಯ ಕಿಟಕಿಗಳೆಲ್ಲಾ ಚೂರುಚೂರಾಗಿಬಿಟ್ಟಿದ್ದವು. ತಮ್ಮ ಮಡದಿ ಹಾಗೂ ಮಗು ಬದುಕಿರುವ ಬಗ್ಗೆ ಎಡ್ಮಂಡ್ಗೆ ಖಾತ್ರಿ ಇರಲಿಲ್ಲ . ಅದೃಷ್ಟವಶಾತ್, ಎಡ್ಮಂಡ್ರ ಮಡದಿ ಹಾಗೂ ಹಸುಗೂಸು ಜಾರ್ಜ್ ಬದುಕುಳಿದಿದ್ದು, ಕಾರ್ಮೋಡದ ನಡುವೆ ಬೆಳ್ಳಿಗೆರೆ ಮೂಡಿದಂತೆ ಆಗಿದೆ.
https://www.instagram.com/p/CEAWwaaJDAr/?utm_source=ig_embed
https://www.instagram.com/p/CEAWBYjJ59E/?utm_source=ig_embed
https://www.instagram.com/p/CEAVGaKJafJ/?utm_source=ig_embed