![](https://kannadadunia.com/wp-content/uploads/2020/04/corona-agencies.jpg)
ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 2948 ಜನರಿಗೆ ಕೊರೊನಾ ಸೋಂಕು ತಗಲಿರುವ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.
ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,02,770 ಕ್ಕೆ ಏರಿಕೆಯಾಗಿದೆ. ಇಂದು 2580 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 66,602 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 34,232 ಸಕ್ರಿಯ ಪ್ರಕರಣಗಳಿದ್ದು, ರಾಜಧಾನಿಯಲ್ಲಿ ಇವತ್ತು ಒಂದೇ ದಿನ 22 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 1635 ಸೋಂಕಿತರು ಸಾವನ್ನಪ್ಪಿದ್ದಾರೆ.
![](https://kannadadunia.com/wp-content/uploads/2020/08/f3d5b208-5a6e-42d2-9ccc-2fa9745df1f8-730x1024.jpg)