ಇಸ್ಲಾಮಾಬಾದ್: ಅತಿ ಕೆಟ್ಟದಾಗಿ ನಿರ್ವಹಣೆ ಮಾಡಿದ್ದ ಪ್ರಾಣಿ ಸಂಗ್ರಹಾಲಯದಿಂದ ಕವನ್ ಎಂಬ 35 ವರ್ಷದ ಆನೆಯೊಂದಕ್ಕೆ 30 ವರ್ಷಗಳ ನಂತರ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಸಂಬಂಧ ಮೇ 22 ರಂದು ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಆನೆಯನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿರುವುದರಿಂದ ಅದಕ್ಕೆ ರೋಗ ಬಂದಿದೆ. ಅದನ್ನು ಬಂಧ ಮುಕ್ತ ಮಾಡಬೇಕು ಎಂದು ಪ್ರಾಣಿ ದಯಾ ಸಂಘದವರು ಹಲವು ದಿನಗಳಿಂದ ಮನವಿ ಮಾಡುತ್ತಿದ್ದರು. ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.
“ಮೃಗಾಲಯದಲ್ಲಿ ಆನೆಗೆ ಬೇಕಾದಷ್ಟು ಮೂಲ ಸೌಕರ್ಯವಿಲ್ಲ. ಆನೆಯನ್ನು ಜೀವಂತವಿಡಲು ಬೇಕಾಗುವ ಸಂಪನ್ಮೂಲ ಕೂಡ ಇಲ್ಲ. ಇದರಿಂದ ಅದನ್ನು ಬಿಡುಗಡೆ ಮಾಡಿ ಅಭಯಾರಣ್ಯಕ್ಕೆ ಬಿಡಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದರು.