ಮಹಿಳೆಯ ಸೌಂದರ್ಯ ಅವಳ ವಯಸ್ಸನ್ನು ಮುಚ್ಚಿ ಹಾಕುತ್ತೆ. ಆದ್ರೆ ಈ ಮಹಿಳೆ ವಯಸ್ಸು 50 ಅಂದ್ರೆ ಯಾರಿಗೂ ನಂಬಲು ಸಾಧ್ಯವಿಲ್ಲ. 19 ವರ್ಷದ ಮಗಳನ್ನು ಹೊಂದಿರುವ ಈ ಮಹಿಳೆ ನೋಡಿದ ಜನರು ಅವರಿಬ್ಬರು ಸಹೋದರಿಯರು ಎಂದುಕೊಳ್ತಾರಂತೆ.
ವೆಸ್ಟ್ ಮಿಡ್ಲ್ಯಾಂಡ್ಸ್ನ ಕೊವೆಂಟ್ರಿಯಲ್ಲಿ ವಾಸಿಸುವ ರಂಜನ್ ಗಿಲ್, ವಯಸ್ಸಿಗಿಂತ ಕಿರಿಯಳಾಗಿ ಕಾಣ್ತಾಳೆ. ಆಕೆ ವಯಸ್ಸು 50 ಎಂದ್ರೆ ನಂಬಲು ಯಾರಿಂದಲೂ ಸಾಧ್ಯವಿಲ್ಲ. ಗಿಲ್ ಹಾಗೂ ಆಕೆ ಕಿರಿಯ ಮಗಳ ಮಧ್ಯೆ 31 ವರ್ಷಗಳ ಅಂತರವಿದೆ.
ಮಕ್ಕಳ ಮುಂದೆ ತಾಯಿಯನ್ನು ನಿಮ್ಮ ಸಹೋದರಿಯೇ ಎಂದು ಪ್ರಶ್ನೆ ಮಾಡಿದಾಗ ಮಕ್ಕಳು ಮುಜುಗರಕ್ಕೀಡಾಗ್ತಾರಂತೆ. ಆದ್ರೆ ಇದು ದೊಡ್ಡ ಅಭಿನಂದನೆ ಎನ್ನುತ್ತಾಳೆ ಗಿಲ್. ಈಕೆ ಪತಿ ಈಕೆಗಿಂತ 10 ವರ್ಷ ಚಿಕ್ಕವರು. ಆದ್ರೆ ಇಬ್ಬರ ಮಧ್ಯೆ ಎಂದು ವಯಸ್ಸು ಬರಲಿಲ್ಲವಂತೆ. ತನ್ನ ಈ ಸೌಂದರ್ಯಕ್ಕೆ ಜೀವನ ಶೈಲಿಯೇ ಕಾರಣವೆನ್ನುತ್ತಾಳೆ ಗಿಲ್. ಫಾಸ್ಟ್ ಫುಡ್ ನಿಂದ ದೂರವಿದ್ದಾರೆ ಗಿಲ್. ಚರ್ಮದ ಆರೈಕೆಗೆ ಮಹತ್ವ ನೀಡುವ ಗಿಲ್ ಕೆಲವೊಮ್ಮೆ ಐಡಿ ಕಾರ್ಡ್ ತೋರಿಸಿ ವಯಸ್ಸು ದೃಢಪಡಿಸುತ್ತಾಳಂತೆ. ಮದ್ಯದಂಗಡಿಯಲ್ಲಿ ಐಡಿ ಕೇಳ್ತಾರೆಂದು ಗಿಲ್ ಹೇಳ್ತಾಳೆ.