ಜನಪ್ರಿಯ ಕಲಾವಿದ ಮತ್ತು ಛಾಯಾಗ್ರಾಹಕ ರಾಮ್ ಇಂದ್ರನಿಲ್ ಕಾಮತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮ್ ಇಂದ್ರನಿಲ್ ಕಾಮತ್ ಗೆ 41 ವರ್ಷ ವಯಸ್ಸಾಗಿತ್ತು. ಮುಂಬೈನ ಅವರ ಮನೆಯ ಬಾತ್ ಟಬ್ ನಲ್ಲಿ ಅವರ ಶವ ಸಿಕ್ಕಿದೆ. ಘಟನೆಯ ಮಾಹಿತಿಯ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ವಶಕ್ಕೆ ಪಡೆದಿದ್ದಾರೆ.
ಬಾತ್ ಟಬ್ ಬಳಿ ಡೆತ್ ನೋಟ್ ಸಿಕ್ಕಿದೆ ಎನ್ನಲಾಗಿದೆ. ರಾಮ್ ಇಂದ್ರನಿಲ್ ಕಾಮತ್ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಲಾಕ್ ಡೌನ್ ವೇಳೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎನ್ನಲಾಗಿದೆ.
ರಾಮ್ ತಮ್ಮ ತಾಯಿ ಜೊತೆ ವಾಸವಾಗಿದ್ದರು ಎನ್ನಲಾಗಿದೆ. ಡೆತ್ ನೋಟ್ ನಲ್ಲಿ ಸಾವಿಗೆ ಯಾರೂ ಕಾರಣರಲ್ಲವೆಂದು ಬರೆದಿದ್ದಾರೆ. ರಾಮ್ ಕಲಾವಿದ, ಛಾಯಾಗ್ರಾಹಕನ ಜೊತೆ ಪುರಾಣ ಶಾಸ್ತ್ರಜ್ಞರಾಗಿದ್ದರು. ತಮ್ಮನ್ನು ಮಹಾಲಕ್ಷ್ಮಿ ಪುತ್ರ ಎಂದು ಹೇಳಿಕೊಳ್ತಿದ್ದರು.