alex Certify ನಮ್ಮ ʼಒಗ್ಗರಣೆʼ ಬಲು ಸ್ಟ್ರಾಂಗ್ ಗುರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ʼಒಗ್ಗರಣೆʼ ಬಲು ಸ್ಟ್ರಾಂಗ್ ಗುರು…!

ಅಡುಗೆಗಳಲ್ಲಿ ಸಾಸಿವೆ, ಜೀರಿಗೆ, ಕೆಲವೊಮ್ಮೆ ಕರಿಮೆಣಸು, ದಾಲ್ಚಿನಿ ಮತ್ತು ಶುಂಠಿ ಬೆರೆಸದೆ ಒಗ್ಗರಣೆ ಹಾಕುವುದೇ ಇಲ್ಲ. ಅವುಗಳಲ್ಲಿ ಆರೋಗ್ಯದ ಒಳಗುಟ್ಟು ಅಡಗಿದೆ ಎಂಬುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.

ದಾಲ್ಚಿನಿ, ಕೊತ್ತಂಬರಿ ಮತ್ತು ಜೀರಿಗೆಯ ಮಸಾಲಾ ಮಿಶ್ರಣವು ಉರಿಯೂತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇವುಗಳ ಬಳಕೆ ಊಟವನ್ನು ಮತ್ತಷ್ಟು ಅರೋಗ್ಯಪೂರ್ಣವಾಗಿಸುತ್ತದೆ. ಇವುಗಳ ಬಳಕೆಯಿಂದ ಊಟದಲ್ಲಿರುವ ಕಾರ್ಬೋಹೈಡ್ರೇಟ್ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

40ರಿಂದ 65 ವರ್ಷದೊಳಗಿನವರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಅವರೆಲ್ಲ ಅಪಾಯಕಾರಿ ಬೊಜ್ಜು ಹಾಗೂ ಹೃದಯ ರಕ್ತನಾಳದ ಸಮಸ್ಯೆಗೆ ಒಳಪಟ್ಟವರಾಗಿದ್ದರು. ಇವರ ರೋಗ ನಿಯಂತ್ರಣಕ್ಕೆ ಬಂದಿದ್ದಲ್ಲದೆ ಬೊಜ್ಜಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಸಂಶೋಧಕರಲ್ಲಿ ಹೊಸ ಭರವಸೆ ಹುಟ್ಟಿಸಿದೆ ಎಂದು ತಿಳಿದು ಬಂದಿದೆ.

ಸರಿಯಾದ ವ್ಯಾಯಾಮ ಮತ್ತು ಆರೋಗ್ಯಕರ ವಸ್ತುಗಳ ಸೇವನೆಯಿಂದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಅದರೊಂದಿಗೆ ನಿಮ್ಮ ದಿನನಿತ್ಯ ಅಡುಗೆಯ ಸಾಮಾಗ್ರಿಗಳಲ್ಲಿ ಜೀರಿಗೆ, ದಾಲ್ಚಿನಿ ಬಳಸಿ ಮತ್ತಷ್ಟು ದೀರ್ಘಕಾಲ ಆರೋಗ್ಯದಿಂದ ಬದುಕುವ ಯೋಜನೆ ರೂಪಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...