ಕರೆ ಗುರುತಿಸುವ ಅಪ್ಲಿಕೇಷನ್ ಬುಧವಾರ ಸ್ಪ್ಯಾಮ್ ಕರೆಗಳ ಬಗ್ಗೆ ಮಾಹಿತಿ ನೀಡಿದೆ. 2019ರಲ್ಲಿ ಭಾರತದಲ್ಲಿ 29.7 ಬಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 8.5 ಬಿಲಿಯನ್ ಸ್ಪ್ಯಾಮ್ ಎಸ್‌ಎಂಎಸ್ ಗಳನ್ನು ಗುರುತಿಸಲಾಗಿದೆ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಟ್ರೂಕಾಲರ್ ತಿಂಗಳಿಗೆ 170 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಕಂಪನಿ ಮಾಹಿತಿ ಪ್ರಕಾರ, 2019ರಲ್ಲಿ ಸ್ಪ್ಯಾಮ್ ಕರೆಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ. ಸ್ಪ್ಯಾಮ್ ಎಸ್‌ಎಂಎಸ್ ವಿಷಯದಲ್ಲಿ ಎಂಟನೇ ಸ್ಥಾನದಲ್ಲಿದೆ.
ಆಂಡ್ರಾಯ್ಡ್ ಫೋನ್ ಬಳಕೆದಾರರಿಗಾಗಿ ಸ್ವೀಡಿಷ್ ಕಂಪನಿ ಈಗ ಹೊಸ ಸ್ಪ್ಯಾಮ್ ಆ್ಯಕ್ಟಿವ್ ವೈಶಿಷ್ಟ್ಯ ಹೊರತಂದಿದೆ. ಅದು ಸ್ಪ್ಯಾಮ್ ಬಗ್ಗೆ ವಿವರವಾದ ಅಂಕಿ-ಅಂಶಗಳನ್ನು ನೀಡುತ್ತದೆ. ಇದ್ರಿಂದ ಗ್ರಾಹಕರಿಗೆ ನೆರವಾಗಲಿದೆ. ಕರೆ ಸ್ವೀಕರಿಸುವ ಮೊದಲೇ ಅವ್ರ ಮಾಹಿತಿ ಲಭ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಸದ್ಯ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಇದು ಲಭ್ಯವಿದ್ದು, ಐಒಎಸ್ ಬಳಕೆದಾರರಿಗೆ ಮುಂದಿನ ವಾರ ಈ ವೈಶಿಷ್ಟ್ಯ ಸಿಗಲಿದೆ.