ಐಪಿಎಲ್ 2020ರ ಶೀರ್ಷಿಕೆ ಪಾಯೋಜಕತ್ವ ಡ್ರೀಮ್ 11 ಪಾಲಾಗಿದೆ. ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವದ ಹೊಣೆ ಹೊತ್ತುಕೊಂಡಿದೆ. ಡ್ರೀಮ್ 11 ಸಹ ಚೀನಾ ಕಂಪನಿಯ ಹೂಡಿಕೆ ಹೊಂದಿದ್ದು, ಇದು ಚರ್ಚೆಗೆ ಕಾರಣವಾಗಿದೆ.
ಬಿಹಾರ ಕ್ರಿಕೆಟ್ ಸಂಘದ ಕಾರ್ಯದರ್ಶಿ ಆದಿತ್ಯ ವರ್ಮಾ ಇದ್ರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡ ನಂತ್ರ ಪ್ರಧಾನಿ ನರೇಂದ್ರ ಮೋದಿ, ಸ್ವಾವಲಂಬಿ ಭಾರತ ನಿರ್ಮಾಣದ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವರ್ಮಾ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್‌ನ ಹಿತೈಷಿಯಾಗಿ ಈ ಮಾತು ಹೇಳುತ್ತಿದ್ದೇನೆ. ಯುಎಇಯಲ್ಲಿ ಐಪಿಎಲ್ ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ. ಡ್ರೀಮ್ 11 ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದೆ. ಇದು ಪಿಎಂ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಅಡ್ಡಿಯಾಗಿದೆ. ಡ್ರೀಮ್ 11 ಚೀನಾ ಹೂಡಿಕೆ ಹೊಂದಿರುವ ಕಂಪನಿ. ಕಂಪನಿಯು ಐಪಿಎಲ್‌ನಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತದೆ ಎಂಬ ಮಾತಿದೆ ಎಂದು ಆದಿತ್ಯ ವರ್ಮಾ ಹೇಳಿದ್ದಾರೆ.