ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ಅನೇಕ ಮಕ್ಕಳು ಸಮಯ ಕಳೆಯಲು ಮೊಬೈಲ್ ದಾಸರಾಗಿದ್ದಾರೆ. ಅನೇಕ ಮಕ್ಕಳಿಗೆ ಆನ್ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದೆ. ಮೊಬೈಲ್ ಅತಿಯಾದ ಬಳಕೆ, ಆನ್ಲೈನ್ ಕ್ಲಾಸುಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಅಂತರರಾಷ್ಟ್ರೀಯ ಸಂಸ್ಥೆ ಯುನಿಸೆಫ್ ಈ ಬಗ್ಗೆ ಎಚ್ಚರಿಕೆ ನೀಡಿದೆ.
ಮಕ್ಕಳು ಗ್ಯಾಜೆಟ್ ಬಳಕೆ ಮಾಡುವಾಗ ಪಾಲಕರೊಬ್ಬರು ಅವ್ರ ಜೊತೆಗಿರಬೇಕು. ಮಕ್ಕಳು ಅರ್ಧ ಗಂಟೆಗಿಂತ ಹೆಚ್ಚು ಸಮಯ ಗ್ಯಾಜೆಟ್ ಬಳಸದಂತೆ ನೋಡಿಕೊಳ್ಳಿ ಎಂದು ಯುನಿಸೆಫ್ ಹೇಳಿದೆ. ಮಕ್ಕಳಿಗೆ ಆನ್ಲೈನ್ ಕ್ಲಾಸುಗಳು ನಡೆಯುತ್ತಿದ್ದರೆ ಪಾಲಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಅದು ಹೇಳಿದೆ.
ಆನ್ಲೈನ್ ಕ್ಲಾಸ್ ಹಾಗೂ ಮೊಬೈಲ್ ಬಳಕೆ ಮಕ್ಕಳ ಕಣ್ಣು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಅವ್ರ ದೈಹಿಕ ಚಟುವಟಿಕೆ ಕಡಿಮೆಯಾಗ್ತಿದೆ. ಮಾನಸಿಕ ವಿಕಾಸಕ್ಕೆ ತೊಂದೆಯಾಗ್ತಿದೆ. ಮಗು ಪ್ರತಿದಿನ ಆನ್ಲೈನ್ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರೆ, ಕೆಲವು ದೈಹಿಕ ಆಟಗಳು ಮತ್ತು ಸೃಜನಶೀಲ ಆಟಗಳು ಮಾಡಿಸಬೇಕು. ಇದ್ರಿಂದ ಮೆದುಳಿಗೆ ವ್ಯಾಯಾಮ ಸಿಗುತ್ತದೆ.
ಗ್ಯಾಜೆಟ್ ಕೆಟ್ಟ ಪರಿಣಾಮದ ಬಗ್ಗೆ ಪಾಲಕರು ಮಕ್ಕಳಿಗೆ ವಿವರಿಸುವ ಅಗತ್ಯವಿದೆ. ಹಠ ಮಾಡುತ್ತಾರೆಂಬ ಕಾರಣಕ್ಕೆ ಮೊಬೈಲ್ ನೀಡುವುದು ಒಳ್ಳೆಯದಲ್ಲ. ಹೊಡೆದು, ಬೈದು ಬುದ್ದಿ ಹೇಳುವ ಬದಲು ಪ್ರೀತಿಯಿಂದ ಗ್ಯಾಜೆಟ್ ನಿಂದಾಗುವ ಅಡ್ಡ ಪರಿಣಾಮಗಳನ್ನು ವಿವರಿಸಬೇಕು.
ಮಗುವಿಗೆ ವಿಶ್ರಾಂತಿ ಕೂಡ ಅಗತ್ಯ. ತುಂಬಾ ಸಮಯ ಆನ್ಲೈನ್ ಕ್ಲಾಸ್ ಗಾಗಿ ಗ್ಯಾಜೆಟ್ ಮುಂದೆ ಕುಳಿತಿದ್ದರೆ ಕಣ್ಣು, ಬೆನ್ನು, ಕತ್ತು ನೋವು ಕಾಡುತ್ತದೆ. ಕತ್ತು, ಬೆನ್ನಿಗೆ ಎಣ್ಣೆ ಮಸಾಜ್ ಮಾಡಬೇಕಾಗುತ್ತದೆ. ಅವ್ರ ನಿದ್ರೆ ಬಗ್ಗೆ ಗಮನ ನೀಡಬೇಕು. ಮಕ್ಕಳು ಅಗತ್ಯವಿರುವಷ್ಟು ನಿದ್ರೆ ಮಾಡುವಂತೆ ನೋಡಿಕೊಳ್ಳಬೇಕು. ಕಣ್ಣುಗಳನ್ನು ರಕ್ಷಿಸುವ ಗ್ಲಾಸ್ ಗಳನ್ನು ಮಕ್ಕಳಿಗೆ ನೀಡಿ. ಪ್ರತಿ 10-15 ನಿಮಿಷಕ್ಕೊಮ್ಮೆ ಮಕ್ಕಳಿಗೆ ವಿಶ್ರಾಂತಿ ನೀಡಿ ಮತ್ತೆ ಕ್ಲಾಸ್ ಮುಂದುವರಿಸಲು ಸಲಹೆ ನೀಡಿ.