alex Certify ಪ್ರೀತಿಸುವ ನಾಟಕವಾಡಿ ಯುವತಿಯರಿಗೆ ವಂಚನೆ: ಕಿಡಿಗೇಡಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸುವ ನಾಟಕವಾಡಿ ಯುವತಿಯರಿಗೆ ವಂಚನೆ: ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಡೇಟಿಂಗ್ ಆಪ್, ಫೇಸ್ಬುಕ್ ಮೂಲಕ ಗೆಳೆತನ ಬೆಳೆಸಿ ಯುವತಿಯರನ್ನು ಮದುವೆಯಾಗುವುದಾಗಿ ವಂಚಿಸಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ಗೌಡನಪಾಳ್ಯ ನಿವಾಸಿಯಾಗಿರುವ ಸುಹಾಸ್ ಹರಿಪ್ರಸಾದ್(34) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಡೇಟಿಂಗ್ ಆಪ್, ಫೇಸ್ಬುಕ್, ಇನ್ಸ್ಟಾಗ್ರಾಂ ನಲ್ಲಿ ಶ್ರೀಮಂತ ಮನೆಯ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ತಾನು ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ.

ಐಷಾರಾಮಿ ಕಾರ್, ಹೋಟೆಲ್ ನಲ್ಲಿ ವಾಸ, ವಿದೇಶಗಳಲ್ಲಿ ಸುತ್ತುತ್ತಿರುವಂತೆ ಫೋಟೋ ಕಳುಹಿಸಿ ಶ್ರೀಮಂತನೆಂದು ಬಿಂಬಿಸಿಕೊಳ್ಳುತ್ತಿದ್ದ. ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದ. ಹೀಗೆ ಹಲವು ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...