![](https://kannadadunia.com/wp-content/uploads/2020/08/zzillusivephotographydp.jpg)
ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ ನಡುವೆ ಚಿತ್ರಗಳನ್ನು ತೆಗೆಯುವುದೇ ಒಂದು ಕಲೆ.
ಸ್ಪೇನ್ನ ಛಾಯಾಗ್ರಾಹಕ ಪಾವೋ ಬಸ್ಕಾಟೋ ತಮ್ಮ ಕ್ಯಾಮೆರಾವನ್ನು ಬಹಳಷ್ಟು ಪ್ರಯೋಗಕ್ಕೆ ಒಳಪಡಿಸುತ್ತಲೇ ಇದ್ದು, ಥರಾವರಿ ಚಿತ್ರಗಳ ಮೂಲಕ ತಮ್ಮ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಾ ಬಂದಿದ್ದಾರೆ.
ಬಾರ್ಸಿಲೋನಾ, ಓಸ್ಲೋ, ಲಂಡನ್ ಹಾಗೂ ನ್ಯೂಯಾರ್ಕ್ ಗಳವರೆಗೂ ಈತ ಅನೇಕ ಬೀದಿಗಳ ಅದ್ಭುತ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 61.9 ಸಾವಿರ ಅನುಯಾಯಿಗಳನ್ನು ಹೊಂದಿರುವ ಈತ, ಅಲ್ಲಿನ ತನ್ನ ಕಲಾತ್ಮಕತೆಯನ್ನು ಧಾರೆ ಎರೆದು ಸೆರೆ ಹಿಡಿದಿರುವ ಚಿತ್ರಗಳ ಪ್ರದರ್ಶನವನ್ನು ಕೊಟ್ಟಿದ್ದಾರೆ.
![](https://kannadadunia.com/wp-content/uploads/2020/08/Pau_Buscato_1.jpg)
![](https://kannadadunia.com/wp-content/uploads/2020/08/Pau_Buscato_3-1.jpg)