ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ನಿಯಮವನ್ನು ಬದಲಿಸಿದ್ದು, ಉಚಿತ ವಹಿವಾಟು ಮಿತಿ ಮುಗಿದ ನಂತರ ಖಾತೆದಾರರು ಶುಲ್ಕ ಪಾವತಿಸಬೇಕಿದೆ.
ಎಸ್‌ಬಿಐ ಖಾತೆದಾರರ ಖಾತೆಯಲ್ಲಿ ಹಣವಿಲ್ಲದ ಕಾರಣ ಎಟಿಎಂ ವಹಿವಾಟು ವಿಫಲವಾದ್ರೂ ದಂಡ ಪಾವತಿಸಬೇಕಾಗುತ್ತದೆ. ಎಸ್‌ಬಿಐನ ಈ ನಿಯಮಗಳು ಜುಲೈ 1 ರಿಂದಲೇ ಜಾರಿಗೆ ಬಂದಿವೆ.
ಮೆಟ್ರೋ ನಗರಗಳ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಎಟಿಎಂನಿಂದ 8 ಬಾರಿ ಉಚಿತ ವಹಿವಾಟು ನಡೆಸಬಹುದು. ಇದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ್ರೆ ಶುಲ್ಕ ಪಾವತಿಸಬೇಕಿದೆ.
ಮೆಟ್ರೋ ಅಲ್ಲದ ನಗರಗಳಲ್ಲಿ ಎಸ್‌ಬಿಐ ಖಾತೆದಾರರು 10 ಬಾರಿ ಎಟಿಎಂಗಳಿಂದ ಉಚಿತ ವಹಿವಾಟು ನಡೆಸಬಹುದು. 5 ಬಾರಿ ಎಸ್‌ಬಿಐ ಎಟಿಎಂ ಮತ್ತು 5 ಬಾರಿ ಇತರ ಬ್ಯಾಂಕುಗಳ ಎಟಿಎಂಗಳಿಂದ ವಹಿವಾಟು ನಡೆಸಬಹುದು. ಇದನ್ನು ಮೀರಿದಲ್ಲಿ 10 ರಿಂದ 20 ರೂಪಾಯಿ ದಂಡ ವಿಧಿಸಲಾಗುವುದು. ಖಾತೆಯಲ್ಲಿ ಹಣವಿಲ್ಲದೆ ವಹಿವಾಟು ನಡೆಸಿ ವಿಫಲವಾದರೆ ಖಾತೆದಾರ 20 ರೂಪಾಯಿ ದಂಡ ಮತ್ತು ಜಿ.ಎಸ್.ಟಿ. ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.